ಖ್ಯಾತ ಸಾಹಿತಿ, ಚಿಂತಕಿ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಬೆಂಗಳೂರು (ಸೆ.05): ಖ್ಯಾತ ಸಾಹಿತಿ, ಚಿಂತಕಿ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಒಂದು ತಿಂಗಳ ಹಿಂದೆಯೇ ಬೆದರಿಕೆ ಬಗ್ಗೆ ಆಪ್ತರ ಬಳಿಕ ಗೌರಿ ಲಂಕೇಶ್ ಹೇಳಿಕೊಂಡಿದ್ದರು. ಈ ಬಗ್ಗೆ ಆಪ್ತ ಸ್ನೇಹಿತೆ ಬಿ ಟಿ ಲಲಿತಾ ನಾಯಕ್ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಗೌರಿ ಲಂಕೇಶ್ ಚಲನವಲನದ ಮೇಲೆ ಹಂತಕರು ನಿಗಾ ಇಟ್ಟಿದ್ದರು. ಹಲವು ದಿನಗಳಿಂದ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದರು. ನನಗೆ ಕರೆ ಮಾಡಿ ಯಾರೋ ಬೆದರಿಕೆ ಹಾಕಿದ್ದಾರೆ. ನಿನ್ನನ್ನು ಉಳಿಸಲ್ಲ.ಸಾಯಿಸ್ತಿನಿ ಎಂದು ಬೆದರಿಕೆ ಹಾಕಿದ್ದರು ಎಂದು ಗೌರಿ ಲಂಕೇಶ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
