ಬೆಂಗಳೂರು (ಡಿ.12): ಅಮೇಥಿಯಲ್ಲಿ ನಗರ ಪಂಚಾಯತ್ ಚುನಾವಣೆಯಲ್ಲೂ ಕೂಡಾ ಕಾಂಗ್ರೆಸ್ 4 ಸ್ಥಾನಕ್ಕೆ ಹೋದ ಮೇಲೆ ಕಾಂಗ್ರೆಸ್ ಅಧ್ಯಕ್ಷರಾಗಲಿರುವ ರಾಹುಲ್ ಗಾಂಧಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ಅವರ ಆಪ್ತ ವಲಯದಲ್ಲಿ ಚರ್ಚೆಯಾಗುತ್ತಿದೆ.

ಉತ್ತರ ಪ್ರದೇಶದ ಜೊತೆ ಕರ್ನಾಟಕದ ಒಂದು ಸೇಫ್ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ತುಘಲಕ್ ಲೇನ್'ನಲ್ಲಿರುವ ರಾಹುಲ್ ನಿವಾಸದಿಂದ ಬರುತ್ತಿರುವ ಸುದ್ದಿಗಳು ಹೇಳುತ್ತಿವೆ. ಆದರೆ ಕ್ಷೇತ್ರ ಯಾವುದು ಎಂಬ ಮಟ್ಟಿಗೆ ಇನ್ನೂ ಚರ್ಚೆಯಾಗಿಲ್ಲ. ಾದರೆ ವೀರಪ್ಪ ಮೋಯ್ಲಿ ತಾನು ಪ್ರತಿನಿಧಿಸುವ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿದರೆ ಗೆಲುವು ನಿಶ್ಚಿತವಾಗಬಹುದು ಎಂದು ಅನೇಕ ಬಾರಿ ರಾಹುಲ್'ಗೆ ಹೇಳಿದ್ದಾರೆ ಎಂಬ ಸುದ್ದಿಯಿದೆ.

ಗುಜರಾತ್'ನಲ್ಲಿ ಸೋತರೆ 2019 ರಲ್ಲಿ ಸ್ತಃ ಎಲ್ಲಿ ನಿಲ್ಲಬೇಕು ಎನ್ನುವುದು ರಾಹುಲ್ ಗಾಂಧಿಗೆ ಸವಾಲು ಕೂಡಾ ಆಗಬಹುದು. ಅಂದ ಹಾಗೆ ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಏಕಾಂಗಿಯಾಗಿ ಗೆದ್ದು ಇಲ್ಲವೇ ಜೆಡಿಎಸ್ ಜೊತೆ ಸಮ್ಮಿಶ್ರ ಸರ್ಕಾರ ಮಾಡಿದರೆ ಮಾತ್ರ ರಾಹುಲ್ ಗಾಂಧಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಧೈರ್ಯ ಮಾಡಬಹುದು. ಗಾಂಧಿ ಕುಟುಂಬದ ಹೆಸರು ಹೇಳಿ ಯಾರೇ ನಿಂತರೂ ಗೆಲ್ಲಬಹುದು ಎಂಬ ಸ್ಥಿತಿಯಲ್ಲಿದ್ದ ದೇಶದಲ್ಲಿ ಗಾಂಧಿ ಉತ್ತರಾಧಿಕಾರಿಯೇ ಎಲ್ಲಿ ನಿಲ್ಲಬೇಕು ಎಂಬ ಚರ್ಚೆಯಾಗುತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯದು.