Asianet Suvarna News Asianet Suvarna News

ಮೋದಿಗೆ ತಿರುಗುಬಾಣವಾಯ್ತಾ ಜಿಎಸ್'ಟಿ? ಕಡಿಮೆ ಆಯ್ತಾ ಮೋದಿ ಹವಾ?

ನೋಟ್​ ಬ್ಯಾನ್ ಮತ್ತು ಜಿಎಸ್​ಟಿ ಜಾರಿ ನಂತರ ಮೋದಿಯ ಜನಪ್ರಿಯತೆ ಮೊದಲಿನಂತೆ ಉಳಿದಿಲ್ಲ ಅನ್ನೋ ಮಾತುಗಳಿವೆ. ಮೋದಿಯ ನಿರ್ಧಾರಗಳಿಂದಾಗಿ ದೇಶದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಮಧ್ಯೆ ಗುಜರಾತ್ ಚುನಾವಣೆ ಎದುರಾಗುತ್ತಿದೆ.  ಸತತ 22 ವರ್ಷಗಳಿಂದ ಗುಜರಾತ್​ನಲ್ಲಿ ಅನಭಿಷಕ್ತ ದೊರೆಯಾಗಿ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಈ ಭಾರಿಯ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ.

Is it Modi Hava Decreased

ನವದೆಹಲಿ (ಅ.23): ನೋಟ್​ ಬ್ಯಾನ್ ಮತ್ತು ಜಿಎಸ್​ಟಿ ಜಾರಿ ನಂತರ ಮೋದಿಯ ಜನಪ್ರಿಯತೆ ಮೊದಲಿನಂತೆ ಉಳಿದಿಲ್ಲ ಅನ್ನೋ ಮಾತುಗಳಿವೆ. ಮೋದಿಯ ನಿರ್ಧಾರಗಳಿಂದಾಗಿ ದೇಶದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಮಧ್ಯೆ ಗುಜರಾತ್ ಚುನಾವಣೆ ಎದುರಾಗುತ್ತಿದೆ.  ಸತತ 22 ವರ್ಷಗಳಿಂದ ಗುಜರಾತ್​ನಲ್ಲಿ ಅನಭಿಷಕ್ತ ದೊರೆಯಾಗಿ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಈ ಭಾರಿಯ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ.

ಮೋದಿ  ಸರ್ಕಾರದ  ಕ್ರಾಂತಿಕಾರಿ  ನಿರ್ಧಾರಗಳಾದ  ನೋಟ್​ಬ್ಯಾನ್ ಮತ್ತು ಜಿಎಸ್​ಟಿ ತಿರುಗುಬಾಣವಾಗುತ್ತಿವೆ. ನೋಟ್​ ಬ್ಯಾನ್ ವೈಫಲ್ಯ ಮತ್ತು ಜಿಎಸ್​ಟಿ ಅಳವಡಿಕೆಯಲ್ಲಿನ ಹಿನ್ನೆಡೆಯನ್ನೇ ಕಾಂಗ್ರೆಸ್​ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.  ಜಿಎಸ್​ಟಿಯಿಂದಾಗಿ  ಗುಜರಾತ್​ನ  ಜವಳಿ ಉದ್ಯಮ ಮತ್ತು ಸಣ್ಣ ಕೈಗಾರಿಕೆಗಳು ಸಾಕಷ್ಟು ನಷ್ಟಕ್ಕೆ ತುತ್ತಾಗಿವೆ. ಯುಪಿಎ ಸರ್ಕಾರದ ವಿರುದ್ಧ ತೆರಿಗೆ ಭಯೋತ್ಪಾದನೆಯ ಆರೋಪ ಮಾಡಿದ್ದ ಪ್ರಧಾನಿ ಮೋದಿ ಈಗ ಅದೇ ಆರೋಪವನ್ನು ಎದುರಿಸುವಂತಾಗಿದೆ. ಹೆಚ್ಚುತ್ತಿರುವ ಆಡಳಿತ ವಿರೋಧಿ ಅಲೆ ಕಾಂಗ್ರೆಸ್​ ಪಾಲಿನ ಮತಗಳಾಗಿ ಪರಿವರ್ತನೆಯಾಗಬಾರದು ಎಂಬ ಕಾರಣಕ್ಕೆ ಮೋದಿ ಗುಜರಾತ್​ಗೆ ಯೋಜನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಅದಕ್ಕೆ ಉತ್ತರ ಉದಾಹರಣೆ ಅಹಮದಾಬಾದ್-ಮುಂಬೈ ಬುಲೆಟ್ ಟ್ರೇನ್ ಯೋಜನೆ.

ಕಳೆದೊಂದು ದಶಕದಲ್ಲೇ ದೇಶದ ಡಿಜಿಪಿ ಅತ್ಯಂತ ಕಡಿಮೆ ಅಂದರೆ ಶೇ.5.7 ಕ್ಕೆ ಕುಸಿದಿದೆ. ದೇಶದ ಆರ್ಥಿಕ ಪ್ರಗತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯುವುದಾಗಿ ಭರವಸೆ ನೀಡಿದ್ದ ಮೋದಿ ನೋಟ್​ ಬ್ಯಾನ್ ಮತ್ತು ಜಿಎಸ್​ಟಿ ಜಾರಿಯಿಂದಾಗಿ ಲೆಕ್ಕ ತಪ್ಪಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಬ್ಯಾನ್​ ಆದ 15.44 ಲಕ್ಷ ಕೋಟಿ ಹಳೆಯ ನೋಟುಗಳಲ್ಲಿ ಶೇ 99 ರಷ್ಟು ನೋಟುಗಳು ಆರ್​ಬಿಐಗೆ ವಾಪಸ್​ ಬಂದಿವೆ. ಜಿಎಸ್​ಟಿ ಜಾರಿಗೆ ಬಂದ ನಂತರವೂ ಅಗತ್ಯ ವಸ್ತುಗಳ ಬೆಲೆಗಳು ಏರುದಿಕ್ಕಿನಲ್ಲೇ ಸಾಗುತ್ತಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಮುಖವಾಗುತ್ತಿದ್ದರೂ ದೇಶದಲ್ಲಿ ಮಾತ್ರ ಪೆಟ್ರೋಲ್​ ದರ ಏರುಗತಿಯಲ್ಲೇ ಇದೆ. ಮೋದಿಯ ಈ ನಿರ್ಧಾರಗಳು ಅವರ ನಾಗಾಲೋಟಕ್ಕೆ ಕಡಿವಾಣ ಹಾಕುತ್ತಿವೆ ಎನ್ನಲಾಗುತ್ತಿದೆ.

ಗುಜರಾತ್ ವಿಧಾನಸಭೆಗೆ ಚುನಾವಣಾ ದಿನಾಂಕ ಇನ್ನೂ ನಿಗದಿಯಾಗಿಲ್ಲವಾದರೂ ಅಕ್ಟೋಬರ್​ನಲ್ಲೇ ಮೋದಿ ಮೂರು ಬಾರಿ ಮೋದಿ ಗುಜರಾತ್​ಗೆ ಭೇಟಿ ನೀಡಿದ್ದಾರೆ. ಈ ವರ್ಷದಲ್ಲೇ ಒಂಭತ್ತು ಬಾರಿ ಮೋದಿ ತವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಅಂದರೆ ಸ್ವತಃ ಮೋದಿಯವರಿಗೂ ಈ ಬಾರಿ ಗೆಲುವು ಸುಲಭ ಅಲ್ಲ ಅನ್ನೋದು ಮನವರಿಕೆಯಾಗಿದೆ ಎಂಬ ವಿಶ್ಲೇಷಣೆಗಳು ವ್ಯಕ್ತವಾಗುತ್ತಿವೆ. ಗುಜರಾತ್ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದರೆ ರಾಷ್ಟ್ರಮಟ್ಟದಲ್ಲಿ ಮುಜುಗರ ಅನುಭವಿಸಬೇಕಾಗುತ್ತದೆ. ಈ ಕಾರಣದಿಂದಲೇ ಗುಜರಾತ್ ಉಳಿಸಿಕೊಳ್ಳಲು ಮೋದಿ ಶತ ಪ್ರಯತ್ನ ನಡೆಸುತ್ತಿದ್ದಾರೆ. ಮೋದಿ ಪ್ರಧಾನಿಯಾಗಿ ದೆಹಲಿಗೆ ಹೋದ ನಂತರ ಗುಜರಾತ್​ನಲ್ಲಿ ಕಾಂಗ್ರೆಸ್​ ತನ್ನ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆ ಪಾಟೀದಾರ್ ಸಮುದಾಯ ಮತ್ತು ಒಬಿಸಿ ಮೀಸಲು ವಿಚಾರ ಬಿಜೆಪಿ ಮಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮೀಸಲಿಗಾಗಿ ಆಗ್ರಹಿಸುತ್ತಿರುವ ಸಮುದಾಯಗಳ ಯುವ ಮುಖಂಡರು ಕಾಂಗ್ರೆಸ್​ ಕಡೆ ವಾಲಿರುವುದೂ ಕೂಡ ಬಿಜೆಪಿ ಪಾಲಿಗೆ ತಲೆನೋವಾಗಿದೆ.

Follow Us:
Download App:
  • android
  • ios