ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೆ ನೀಡಲಾಗಿರುವ ವಿವಿಧ ರೀತಿಯ ಹಕ್ಕಿನ ರೀತಿ, ಇನ್ನು ಮುಂದೆ ಸೂಕ್ತ ರೀತಿಯಲ್ಲಿ ವಿದ್ಯುತ್‌ ಪಡೆಯುವುದು ಕೂಡಾ ಜನರ ಮೂಲಭೂತ ಹಕ್ಕನ್ನಾಗಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ನವದೆಹಲಿ: ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೆ ನೀಡಲಾಗಿರುವ ವಿವಿಧ ರೀತಿಯ ಹಕ್ಕಿನ ರೀತಿ, ಇನ್ನು ಮುಂದೆ ಸೂಕ್ತ ರೀತಿಯಲ್ಲಿ ವಿದ್ಯುತ್‌ ಪಡೆಯುವುದು ಕೂಡಾ ಜನರ ಮೂಲಭೂತ ಹಕ್ಕನ್ನಾಗಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಕುರಿತ ಕರಡು ಮಸೂದೆಯೊಂದನ್ನು ಅಂತಿಮಗೊಳಿಸಲಾಗುತ್ತಿದ್ದು, ಇದನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. ಮುಂದಿನ ಏಪ್ರಿಲ್‌ನೊಳಗೆ ದೇಶದ ಎಲ್ಲ ಹಳ್ಳಿಗಳಿಗೂ ವಿದ್ಯುತ್‌ ಒದಗಿಸಬೇಕೆಂಬ ಗುರಿ ಹೊಂದಿರುವ ಕೇಂದ್ರ, ಅದಕ್ಕೆ ಕಾನೂನಿನ ಬಲ ನೀಡಲು ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ‘ವಿದ್ಯುತ್‌ ಹಕ್ಕು’ ಮಸೂದೆ ಮಂಡಿಸಲು ಮುಂದಾಗಿದೆ.

2019, ಏಪ್ರಿಲ್‌ನಿಂದ ಸಹಜ ಸ್ಥಿತಿಗಳಲ್ಲಿ ದಿನವಿಡೀ ವಿದ್ಯುತ್‌ ಒದಗಿಸಲು ವಿಫಲವಾದಲ್ಲಿ, ವಿದ್ಯುತ್‌ ವಿತರಕರನ್ನೇ ಶಿಕ್ಷೆಗೆ ಗುರಿಯಾಗಿರುವುದು ಈ ಕಾನೂನಿನ ಪ್ರಮುಖ ಉದ್ದೇಶವಾಗಿದೆ.

2019, ಏ.1ರಿಂದ ದೇಶದ ಪ್ರತಿಯೊಂದು ಮನೆಗೂ ವರ್ಷದ ಎಲ್ಲ ದಿನಗಳಲ್ಲೂ ದಿನದ 24 ಗಂಟೆಗಳ ಕಾಲ ವಿದ್ಯುತ್‌ ಒದಗಿಸುವ ಗುರಿ ಕೇಂದ್ರ ಸರ್ಕಾರ ಹೊಂದಿದೆ.