ಮಣಿಪುರದ ಉಕ್ಕಿನ ಮಹಿಳೆ ಇರೋಮ್ ಶರ್ಮಿಳಾ ಬಹುಕಾಲದ ಬ್ರಿಟಿಷ್ ಸಂಗಾತಿ ದೇಸ್ಮೋಂಡ್ ಕೌಟಿನ್’ಹೋರವರನ್ನು ಜುಲೈನಲ್ಲಿ ಮದುವೆಯಾಗಲಿದ್ದಾರೆ.

ನವದೆಹಲಿ (ಮೇ.09): ಮಣಿಪುರದ ಉಕ್ಕಿನ ಮಹಿಳೆ ಇರೋಮ್ ಶರ್ಮಿಳಾ ಬಹುಕಾಲದ ಬ್ರಿಟಿಷ್ ಸಂಗಾತಿ ದೇಸ್ಮೋಂಡ್ ಕೌಟಿನ್’ಹೋರವರನ್ನು ಜುಲೈನಲ್ಲಿ ಮದುವೆಯಾಗಲಿದ್ದಾರೆ.

ಮದುವೆ ದಿನಾಂಕವಿನ್ನು ನಿಗದಿಯಾಗಿಲ್ಲ. ಜುಲೈ ಅಂತ್ಯದೊಳಗೆ ತಮಿಳುನಾಡಿನಲ್ಲಿ ಮದುವೆಯಾಗುವ ಯೋಚನೆಯಿದೆ ಎಂದು ಶರ್ಮಿಳಾ ಹೇಳಿದ್ದಾರೆ.

ನನ್ನ ಹೋರಾಟವನ್ನು ಮುಂದುವರೆಸುತ್ತೇನೆ ಆದರೆ ರಾಜಕಾರಣಿಯಾಗಿಯಲ್ಲ, ನಾಗರೀಕಳಾಗಿ ಹೋರಾಡುತ್ತೇನೆ. ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಧರಿಸಿದ್ದೇನೆ.

ಮದುವೆಯ ಬಳಿಕ ದಂಪತಿಗಳು ತಮಿಳುನಾಡಿನಲ್ಲಿ ವಾಸಿಸಲು ನಿರ್ಧರಿಸಿದ್ದಾರೆ. ದೇಸ್ಮಂಡ್ ಭಾರತಕ್ಕೆ ಹಿಂತಿರುಗಲು ವೀಸಾ ಪಡೆಯಲಿದ್ದಾರೆ. ದೇಸ್ಮಂಡ್ ಮದುವೆಗಾಗಿ ಈಗಾಗಲೇ ಭಾರತಕ್ಕೆ ಬಂದಿದ್ದಾರೆ.

ದೇಸ್ಮಂಡ್ ಕುಟುಂಬದವರು ಮೂಲತಃ ಗೋವಾದವರು. ಮದುವೆಯ ಬಗ್ಗೆ ನಾನು ನನ್ನ ಕುಟುಂಬದವರಿಗೆ ತಿಳಿಸಿಲ್ಲ. ಅದರಲ್ಲೂ ನನ್ನ ತಾಯಿಗೆ ವಿಚಾರ ತಿಳಿದಿಲ್ಲ. ಶೀಘ್ರದಲ್ಲಿಯೇ ಮನೆಯವರೊಂದಿಗೆ ಮಾತನಾಡುತ್ತೇನೆ. ಮದುವೆಗೆ ಕೆಲವೇ ಸ್ನೇಹಿತರು ಹಾಗೂ ವೆಲ್ ವಿಶರ್ ಗಳನ್ನು ಆಹ್ವಾನಿಸಲಿದ್ದೇನೆ ಎಂದು ಇರೋಮ್ ಶರ್ಮಿಳಾ ಹೇಳಿದ್ದಾರೆ.