Asianet Suvarna News Asianet Suvarna News

ಸಿಎಂ ಕನಸು ಕಾಣುತ್ತಿದ್ದವಳಿಗೆ ಸಿಕ್ಕಿದ್ದು 90 ಮತ !

ಈ ಧೀರ ಮಹಿಳೆ ಮತ್ತಿನ್ಯಾರು ಅಲ್ಲ ವ್ಯವಸ್ಥೆಯ ವಿರುದ್ಧ ಸತತ 16 ವರ್ಷಗಳ ಕಾಲ ಅಮರಣಾಂತ ಉಪವಾಸ ಕೈಗೊಂಡ ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಚಾನು ಶರ್ಮಿಳಾ. ಈಕೆಯ ಗಂಡೆದೆಯ ಹೋರಾಟಕ್ಕೆ ವಿಶ್ವವೇ ಬೆರಗಾಗಿತ್ತು. ಶರ್ಮಿಳಾದು ಅಂತಹ ದಿಟ್ಟ ಹೋರಾಟ.

Irom Sharmila got a few dozen votes in Ibobi Singhs bastion

ಇಂಫಾಲ್(ಮಾ.11): ಈಕೆ ಸಾಮಾನ್ಯ ಹೋರಾಟಗಾರ್ತಿಯಲ್ಲ ತನ್ನ ಪ್ರತಿಭಟನೆಯ ಮೂಲಕ ಇಡೀ ದೇಶದ ಗಮನ ಸೆಳೆದ ಅಪ್ರತಿಮ ಛಲಗಾರ್ತಿ. ಸರ್ಕಾರದ ವಿರುದ್ಧ ಸುಡಿದೆದ್ದ ಈಕೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳದಿದ್ದಳು.

ಈ ಧೀರ ಮಹಿಳೆ ಮತ್ತಿನ್ಯಾರು ಅಲ್ಲ ವ್ಯವಸ್ಥೆಯ ವಿರುದ್ಧ ಸತತ 16 ವರ್ಷಗಳ ಕಾಲ ಅಮರಣಾಂತ ಉಪವಾಸ ಕೈಗೊಂಡ ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಚಾನು ಶರ್ಮಿಳಾ. ಈಕೆಯ ಗಂಡೆದೆಯ ಹೋರಾಟಕ್ಕೆ ವಿಶ್ವವೇ ಬೆರಗಾಗಿತ್ತು. ಶರ್ಮಿಳಾದು ಅಂತಹ ದಿಟ್ಟ ಹೋರಾಟ.

ಭಾರತೀಯ ಸೇನಾ ಪಡೆಯ ವಿಶೇಷ ಅಧಿಕಾರದ ಕಾಯಿದೆ(AFSPA) ಮಣಿಪುರದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಂಡಕಂಡಲ್ಲೇ ಯಾವುದೇ ಕಾರಣ ನೀಡದೆ ನಾಗರಿಕರನ್ನು ಕೊಲ್ಲಲಾಗುತ್ತದೆ, ಹಿಂಸೆ ನೀಡಲಾಗುತ್ತಿದೆ. ಈ ಕಾಯಿದೆಯನ್ನು ಕೇಂದ್ರ ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು ಎಂದು 2000 ನವೆಂಬರ್ 2 ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಳು. ಸರ್ಕಾರ ಶರ್ಮಿಳಾಳ ಉಪವಾಸ ನಿಲ್ಲಿಸಬೇಕೆಂದು ಎಷ್ಟೆ ಪ್ರಯತ್ನ ಪಟ್ಟರೂ ಅದಕ್ಕೆಲ್ಲ ಜಗ್ಗಿರಲಿಲ್ಲ.

ಕೊನೆಗೆ ತಾನು ಸಾರ್ವಜನಿಕ ಜೀವನದ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗುತ್ತೇನೆಂದು 2016 ಆಗಸ್ಟ್'ನಲ್ಲಿ ಉಪವಾಸ ಕೊನೆಗೊಳಿಸಿದ್ದಳು.ಇತ್ತೀಚಿಗೆ ನಡೆದಿದ್ದ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ 'ಪ್ರಜಾ' ಎಂಬ ಪಕ್ಷ ಸ್ಥಾಪಿಸಿ ಸ್ವತಃ ಮುಖ್ಯಮಂತ್ರಿ ಒಕ್ರಂ ಇಬೋಬಿ ಸಿಂಗ್ ವಿರುದ್ಧ ತೌಬಾಲ್ ವಿಧಾನಸಭಾ ಕ್ಷೇತ್ರದಲ್ಲಿ  ಸ್ಪರ್ಧಿಸಿದ್ದಳು.

ಆದರೆ ಇಂದು ಪ್ರಕಟಗೊಂಡ ಫಲಿತಾಂಶದಿಂದ ಮಾನವ ಹಕ್ಕು ಹೋರಾಟಗಾರ್ತಿಗೆ ಭಾರಿ ನಿರಾಸೆ ಉಂಟಾಗಿದೆ. ಜನರಿಗಾಗಿ ಹೋರಾಟ ಮಾಡಿದ ಈಕೆಗೆ ಸ್ವತಃ ಅವರೇ ಕೈಹಿಡಿಯಲಿಲ್ಲ. ತೌಬಾಲ್ ಕ್ಷೇತ್ರದಲ್ಲಿ ಈಕೆ ಪಡೆದ ಮತ ಕೇವಲ 90. ದಿಟ್ಟ ಮಹಿಳೆ ಇರೋಮಿ ಚುನಾವಣೆಯಲ್ಲಿ ಠೇವಣಿಯನ್ನೇ ಕಳೆದುಕೊಂಡು ಬಿಟ್ಟಿದ್ದಾಳೆ. ನೋಟಗಿಂತ ಕಡಿಮೆ ಮತ ಈಕೆಗೆ ಲಭಿಸಿದೆ. ಈ ಕ್ಷೇತ್ರದಲ್ಲಿ ನೋಟಾಗೆ 143 ಮತಗಳು ಲಭಿಸಿವೆ. ತನ್ನ ಹುಟ್ಟೂರಿನಲ್ಲೂ ಸೋಲನ್ನು ಅನುಭವಿಸಿದ್ದಾಳೆ.

ಇರೋಮಿ ಪ್ರಕಾರ ಚುನಾವಣೆಯಲ್ಲಿ ತಾನು ಸೋಲಲು ಕಾರಣ ಭ್ರಷ್ಟಾಚಾರ ಹಾಗೂ ಅಧಿಕಾರ ಬಲವೇ ಪ್ರಮುಖ ಕಾರಣವಾಗಿದೆ. ತಾನು ಈ ಸೋಲಿನಿಂದ ವಿಚಲಿತನಾಗಿಲ್ಲ. ಭ್ರಷ್ಟಾಚಾರ ಜಯಗಳಿಸಿದ್ದು, ಜನ ಮುಂದೆ ನನ್ನ ಕೈ ಹಿಡಿಯುವ ನಿರೀಕ್ಷೆಯಿದೆ' ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾಳೆ. ಸರಿಯಾಗಿ ಚುನಾವಣಾ ಪ್ರಚಾರ ಮಾಡದೆ, ಸರ್ಕಾರದ ಭ್ರಷ್ಟ ಆಡಳಿತವನ್ನು ಜನರಿಗೆ ಮುಟ್ಟಿಸದ ಕಾರಣ ಈಕೆಗೆ ಸೋಲುಂಟಾಗಿದೆ ಎಂದು ವಿಶ್ಲೇಷಕರ ಅಭಿಪ್ರಾಯ ಪಟ್ಟಿದ್ದಾರೆ.

60 ವಿಧಾನಸಭಾ ಕ್ಷೇತ್ರಗಳಿರುವ ಮಣಿಪುರ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ 27, ಬಿಜೆಪಿ 22 ಹಾಗೂ ಇತರರು 11 ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.

Follow Us:
Download App:
  • android
  • ios