Asianet Suvarna News Asianet Suvarna News

ಇಬ್ಬರು ಕಾಶ್ಮೀರಿ ಯುವಕರಿಗೆ ಪಠಾಣ್ ಸಹೋದರರಿಂದ ತರಬೇತಿ

ಕ್ರಿಕೆಟ್ ಜೀವನದಿಂದ ನಿವೃತ್ತರಾದ ಬಳಿಕ ಕ್ರಿಕೆಟಿಗರು ಕೋಚಿಂಗ್ ಅಕಾಡೆಮಿಯನ್ನು ಸ್ಥಾಪಿಸಿ ತಮ್ಮನ್ನು ಅಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ. ಆದರೆ ಅದಕ್ಕೆ ಭಿನ್ನವಾಗಿ ಪಠಾಣ್ ಸಹೋದರರು, ಒಂದೆಡೆ ಕ್ರಿಕೆಟ್ ಆಡುತ್ತಲೇ ಕ್ರಿಕೆಟಿಗರ ತರಬೇತಿಗಾಗಿ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ.

Irfan Pathans Academy To Train Two Young Cricketers From Jammu And Kashmir

ಕ್ರಿಕೆಟ್ ಜೀವನದಿಂದ ನಿವೃತ್ತರಾದ ಬಳಿಕ ಕ್ರಿಕೆಟಿಗರು ಕೋಚಿಂಗ್ ಅಕಾಡೆಮಿಯನ್ನು ಸ್ಥಾಪಿಸಿ ತಮ್ಮನ್ನು ಅಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ. ಆದರೆ ಅದಕ್ಕೆ ಭಿನ್ನವಾಗಿ ಪಠಾಣ್ ಸಹೋದರರು, ಒಂದೆಡೆ ಕ್ರಿಕೆಟ್ ಆಡುತ್ತಲೇ ಕ್ರಿಕೆಟಿಗರ ತರಬೇತಿಗಾಗಿ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ.

ಯುವ ಕ್ರಿಕೆಟ್ ಆಕಾಂಕ್ಷಿಗಳಿಗೆ ಉತ್ತಮ ತರಬೇತಿ ನೀಡುವ ಗುರಿಯಿಟ್ಟುಕೊಂಡು ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ ಸಹೋದರರು ನೊಯ್ಡಾದಲ್ಲಿ ‘ಕ್ರಿಕೆಟ್ ಅಕಾಡೆಮಿ ಆಫ್ ಪಠಾಣ್ಸ್’ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.

ಭಾರತೀಯ ಸೇನೆಯೊಂದಿಗೆ ಸಹಯೋಗ ಹೊಂದಿರುವ ಅಕಾಡೆಮಿಯು ಇಬ್ಬರು ಕಾಶ್ಮೀರಿ ಯುವಕರನ್ನು ತರಬೇತಿಗಾಗಿ ಆಯ್ಕೆಮಾಡಿಕೊಂಡಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕುಪ್ವಾರ ಜಿಲ್ಲೆಯ ದಾನಿಶ್ ಖದೀರ್ (18) ಹಾಗೂ ಶಾರುಖ್ ಹುಸೈನ್ (20) ಆಯ್ಕೆಯಾದವರು. ಅರ್ಹತಾ ಪರೀಕ್ಷೆ ನಡೆಸಿದ ಬಳಿಕ, ಸುಮಾರು 100 ಆಕಾಂಕ್ಷಿಗಳ ಪೈಕಿ ಭಾರತೀಯ ಸೇನೆಯು  ಇಬ್ಬರನ್ನು ಆಯ್ಕೆ ಮಾಡಿದೆ.

Follow Us:
Download App:
  • android
  • ios