ಅರೆಸ್ಟ್ ಮಾಡುವಷ್ಟು ಕೆಟ್ಟದಾಗಿತ್ತಾ ಈ ಡ್ಯಾನ್ಸ್.. ನೀವೇ ನೋಡಿ..

First Published 9, Jul 2018, 10:24 PM IST
Iran women dance in support of arrested Instagram teen
Highlights

ಆಕೆ ಎಲ್ಲರಂತೆ ಸೋಶಿಯಲ್ ಮೀಡಿಯಾದಲ್ಲಿ ಬಿಜಿಯಾಗಿದ್ದಳು. ತಾನು ನೃತ್ಯ ಮಾಡಿದ ವಿಡಿಯೋವನ್ನು ಅಪ್ ಲೋಡ್ ಮಾಡುತ್ತಿದ್ದಳು. ಆದರೆ ಇದೀಗ ಆಕೆ ಪೊಲೀಸ್ ಕಸ್ಟಡಿಯಲ್ಲಿ ಕೂರಬೇಕಾಗಿದೆ. ಏನಿದು ಸುದ್ದಿ..? ಮುಂದೆ ಓದಿ

ಇನ್‌ಸ್ಟಾಗ್ರಾಂನಲ್ಲಿ ತನ್ನ ನೃತ್ಯದ ವೀಡಿಯೋವನ್ನು ಪೋಸ್ಟ್‌ ಮಾಡಿ, ಸಾವಿರಾರು ಫಾಲೋವರ್‌ಗಳನ್ನು ಗಳಿಸಿದ್ದ ಇರಾನ್ ಯುವತಿ ಪೊಲೀಸ್ ವಿಚಾರಣೆ ಎದುರಿಸಬೇಕಾಗಿದೆ. 

ಸಂಪ್ರದಾಯವಾದಿ ರಾಷ್ಟ್ರವಾದ ಇರಾನ್‌ನಲ್ಲಿ ಈ ರೀತಿಯ ವರ್ತನೆ ಸಹಿಸಲು ಸಾದ್ಯವಿಲ್ಲ ಎಂದಿರುವ ಅಲ್ಲಿನ ಆಡಳಿತ 18 ವರ್ಷದ ಮಾಯಿದೇ ಹೊಜಾಬ್ರಿ ಯನ್ನು ಬಂಧಿಸಿದ್ದಾರೆ. ಇಷ್ಟಕ್ಕೂ ಆಕೆ ಅಶ್ಲೀಲಕರ ವಿಡಿಯೋ ವನ್ನೇನೂ ಅಪ್ ಲೋಡ್ ಮಾಡಿರಲಿಲ್ಲ.

ಮಾಯಿದೇ ಹೊಜಾಬ್ರಿ (18) ತನ್ನ ಹೆಸರಲ್ಲಿರುವ ವಿವಿಧ ಖಾತೆಗಳಲ್ಲಿ ಇರಾನ್‌ ಹಾಗೂ ಪಾಶ್ಚಾತ್ಯ ಶೈಲಿಯಲ್ಲಿ ನೃತ್ಯ ಮಾಡುತ್ತಿರುವಂಥ ಸುಮಾರು 300 ವೀಡಿಯೋಗಳನ್ನು ಅಪ್‌ಲೋಡ್‌ ಮಾಡಿದ್ದರು. 70 ಸಾವಿರಕ್ಕೂ ಅಧಿಕ ಫಾಲೋವರ್ಸ್ ಆಕೆಗೆ ಇದ್ದಾರೆ.

loader