ಪರಮಾಣು ಸಂಶೋಧನಾ ನಿರ್ಬಂಧ ತೆರವುಗೊಳಿಸಿದ ಇರಾನ್| ಅಮೆರಿಕದ ಆರ್ಥಿಕ ನಿರ್ಬಂಧದ ಹೊರತಾಗಿಯೂ ಪರಮಾಣು ಸಂಶೋಧನೆಗೆ ಒತ್ತು| ಪರಮಾಣು ಸಂಶೋಧನಾ ನಿರ್ಬಂಧ ತೆರವುಗೊಳಿಸಿದ ಅಮೆರಿಕ ಅಧ್ಯಕ್ಷ ಹಸನ್ ರೌಹಾನಿ| ಜಂಟಿ ಸಮಗ್ರ ಕ್ರಿಯಾಯೋಜನೆ ಅನ್ವಯ ಪರಮಾಣು ಸಂಶೋಧನಾ ನಿರ್ಬಂಧ ತೆರವು| ಗರಿಗೆದರಿದ ಇರಾನ್ ಪರಮಾಣು ಚಟುವಟಿಕೆಗಳು|
ಟೆಹ್ರನ್(ಸೆ.06): ಇರಾನ್ ತನ್ನ ಪರಮಾಣು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ವಿಸ್ತರಿಸಲಿದ್ದು, ಈ ಹಿನ್ನೆಲೆಯಲ್ಲಿ ಪರಮಾಣು ಸಂಶೋಧನಾ ನಿರ್ಬಂಧವನ್ನು ಅಧ್ಯಕ್ಷ ಹಸನ್ ರೌಹಾನಿ ತೆರವುಗೊಳಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ರೌಹಾನಿ, 2015 ರ ಪರಮಾಣು ಒಪ್ಪಂದದ ಅನ್ವಯ ದೇಶದ ಮೇಲೆ ಹೇರಲಾಗಿದ್ದ ಪರಮಾಣು ಸಂಶೋಧನಾ ನಿರ್ಬಂಧಗಳನ್ನು ಜಂಟಿ ಸಮಗ್ರ ಕ್ರಿಯಾಯೋಜನೆ ಅನ್ವಯ ಇರಾನ್ ತೆರವುಗೊಳಿಸಲಿದೆ ಎಂದು ಹೇಳಿದ್ದಾರೆ.
ಪರಮಾಣು ಸಂಶೋಧನೆ ಮತ್ತು ಅಭಿವೃದ್ಧಿಗೆ ಇರಾನ್ ಇದೀಗ ಮುಕ್ತವಾಗಿದ್ದು, ಇರಾನ್ ನ ಪರಮಾಣು ಶಕ್ತಿ ಸಂಘ (ಎಇಒಐ) ದೇಶದ ತಾಂತ್ರಿಕ ಅಗತ್ಯಗಳಿಗೆ ತಕ್ಕಂತೆ ಕೂಡಲೇ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಿದ್ಧವಾಗಿದೆ ಎಂದು ರೌಹಾನಿ ಸ್ಪಷ್ಟಪಡಿಸಿದ್ದಾರೆ.
ರೌಹಾನೆ ಘೋಷಣೆಯಿಂದಾಗಿ ಇರಾನ್’ನ ಪರಮಾಣು ಚಟುವಟಿಕೆಗಳು ಗರಿಗೆದರಿಲಿದ್ದು, ಇದಕ್ಕೆ ಅಮೆರಿಕ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಕಾದು ನೋಡಬೇಕಿದೆ. ಸದ್ಯ ಇರಾನ್ ಮೇಲೆ ಆರ್ಥಿಕ ನಿರ್ಬಂಧ ಹೇರಿರುವ ಅಮೆರಿಕ, ರೌಹಾನಿಯ ಹೊಸ ಘೋಷಣೆಯಿಂದ ಮತ್ತಷ್ಟು ಕೆರಳುವುದು ನಿಶ್ಚಿತ.
