ಬೃಹತ್ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜಾಲವನ್ನು ಮಹದೇವಪುರ ಪೊಲೀಸರು ಬೇಧಿಸಿದ್ದು  ಐವರು ಆರೋಪಿಗಳನ್ನು  ಬಂಧಿಸಿದ್ದಾರೆ.  

ಬೆಂಗಳೂರು (ಮೇ. 08): ಬೃಹತ್ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜಾಲವನ್ನು ಮಹದೇವಪುರ ಪೊಲೀಸರು ಬೇಧಿಸಿದ್ದು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಹೊಸಕೋಟೆ ಮೂಲದ ಕಿಂಗ್ ಪಿನ್ ಗೌತಮ್ ಸೇರಿದಂತೆ ಐವರು ಆರೋಪಿಗಳು ಅಂದರ್ ಆಗಿದ್ದಾರೆ. ಆರೋಪಿಗಳು ಬೆಟ್ಚಿಂಗ್ ದಂಧೆ ನಡೆಸುತ್ತಿದ್ದರು. 

50 ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ಬಳಸಿ ಆರೋಪಿಗಳು ಕಾಡುಗೋಡಿಯ ಸೀಗೆಹಳ್ಳಿ ಭಾರಿ ಮೊತ್ತದ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಹೊಸಕೋಟೆ ,ಕಾಡುಗೋಡಿ ,ಕೆಆರ್ ಪುರ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಆರೋಪಿಗಳು ಐಪಿಎಲ್ ಕ್ರಿಕೆಟ್ ಬೆಟ್ಚಿಂಗ್ ಮಾಡುತ್ತಿದ್ದರು. 

ನಿನ್ನೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಹೇದಪುರ ಪೊಲೀಸರು 50 ಮೊಬೈಲ್ ,ಎರಡು ಲ್ಯಾಪ್ ಟಾಪ್ ಹಾಗೂ ಲಕ್ಷಾಂತರ ನಗದು ಹಣ ವಶಪಡಿಸಿಕೊಂಡಿದ್ದಾರೆ. 

ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.