ಆ್ಯಪಲ್ ಐಫೋನ್ 10 ವಿಶ್ವದೆಲ್ಲೆಡೆ ಭರ್ಜರಿ ಮಾರಾಟವಾಗುತ್ತಿದೆ. ಹೀಗಾಗಿಯೇ ಕಂಪನಿ ಇದೀಗ ವಿಶ್ವದಲ್ಲಿಯೇ ಮಾರುಕಟ್ಟೆ ಮೌಲ್ಯದಲ್ಲಿ ಅತಿದೊಡ್ಡ ಕಂಪನಿಯಾಗಿ ಹೊರ ಹೊಮ್ಮಿದೆ.
ನವದೆಹಲಿ: ಆ್ಯಪಲ್ ಐಫೋನ್ 10 ವಿಶ್ವದೆಲ್ಲೆಡೆ ಭರ್ಜರಿ ಮಾರಾಟವಾಗುತ್ತಿದೆ. ಹೀಗಾಗಿಯೇ ಕಂಪನಿ ಇದೀಗ ವಿಶ್ವದಲ್ಲಿಯೇ ಮಾರುಕಟ್ಟೆ ಮೌಲ್ಯದಲ್ಲಿ ಅತಿದೊಡ್ಡ ಕಂಪನಿಯಾಗಿ ಹೊರ ಹೊಮ್ಮಿದೆ.
ಕಂಪನಿಯ ಈ ಭಾರಿ ಲಾಭಕ್ಕೆ ಕಾರಣ ಏನು ಎಂಬ ಅಂಶ ಇದೀಗ ಹೊರಬಿದ್ದಿದೆ. ಐಫೋನ್ 10 ವೆಚ್ಚ ಕೇವಲ 25000 ರು. ಆಗಿದ್ದು, ವಿದೇಶಗಳಲ್ಲಿ 64935 ರು.ಗೆ ಮಾರಾಟ ಮಾಡಲಾಗುತ್ತಿದೆ.
64 ಜಿ.ಬಿ. ಸಾಮರ್ಥ್ಯದ ಫೋನ್‌ಗೆ 89000 ರು. ನಿಗದಿ ಮಾಡಲಾಗಿದೆ. 256 ಸಾಮಾರ್ಥ್ಯದ ಐಫೋನ್‌ಗೆ 102000 ದರ ಆಗುತ್ತದೆ. ಅಂದರೆ ಆ್ಯಪಲ್, ಶೇ.65ರಷ್ಟು ಲಾಭ ಇಟ್ಟುಕೊಂಡು ಮಾರಾಟ ಮಾಡುತ್ತಿದೆ.
(ಸಾಂದರ್ಭಿಕ ಚಿತ್ರ)
