ಗೌರಿ ಲಂಕೇಶ್ ಅವರ ಹತ್ಯೆ ವಿಷಯ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣ ಫೇಸ್‌ಬುಕ್’ ಮತ್ತು ಟ್ವೀಟರ್‌'ನಲ್ಲಿ ಸ್ಟೇಟಸ್ ಹಾಕಿ ವಿಕೃತಿ ಮೆರೆದಿದ್ದವರನ್ನು ಎಸ್‌'ಐಟಿ (ವಿಶೇಷ) ತನಿಖಾ ತಂಡ ಮಂಗಳವಾರ ವಿಚಾರಣೆ ನಡೆಸಿದೆ.

ಬೆಂಗಳೂರು(ಸೆ.20): ಗೌರಿ ಲಂಕೇಶ್ ಅವರ ಹತ್ಯೆ ವಿಷಯ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣ ಫೇಸ್‌ಬುಕ್’ ಮತ್ತು ಟ್ವೀಟರ್‌'ನಲ್ಲಿ ಸ್ಟೇಟಸ್ ಹಾಕಿ ವಿಕೃತಿ ಮೆರೆದಿದ್ದವರನ್ನು ಎಸ್‌'ಐಟಿ (ವಿಶೇಷ) ತನಿಖಾ ತಂಡ ಮಂಗಳವಾರ ವಿಚಾರಣೆ ನಡೆಸಿದೆ.

ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ 11 ಮಂದಿ ಗೌರಿ ಲಂಕೇಶ್ ಅವರ ಹತ್ಯೆ ಸುದ್ದಿ ತಿಳಿದ ಕೂಡಲೇ ಫೇಸ್‌ಬುಕ್’ ಹಾಗೂ ಟ್ವೀಟರ್‌ನಲ್ಲಿ ಹರ್ಷ ವ್ಯಕ್ತಪಡಿಸಿ ಸ್ಟೇಟಸ್ ಹಾಕುವ ಮೂಲಕ ಸಾವಿನಲ್ಲೂ ವಿಕೃತಿ ಮೆರೆದಿದ್ದರು. ಅಂತಹ ಯುವಕರಿಗೆ ನೋಟಿಸ್ ನೀಡಿದ್ದ ಎಸ್‌'ಐಟಿ ತಂಡ ಮಂಗಳವಾರ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದೆ.

ಗೌರಿ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ ಕಠೋರವಾಗಿ ಲೇಖನಗಳನ್ನು ಬರೆಯುತ್ತಿದ್ದರು. ಹೀಗೆ ಹಿಂದೂಪರ ಸಂಘಟನೆ ಮತ್ತು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಲೇಖನ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆ ಯುವಕರು ಕೋಪಗೊಂಡಿದ್ದರು. ಗೌರಿ ಅವರ ಹತ್ಯೆ ವಿಷಯ ತಿಳಿದ ಕೂಡಲೇ ಸಂತೋಷದಿಂದ ಸ್ಟೇಟಸ್ ಹಾಕಿದ್ದಾಗಿ ಹೇಳಿಕೆ ನೀಡಿದ್ದಾರೆ ಎಂದು ವಿಚಾರಣೆ ವೇಳೆ ಯುವಕರು ಹೇಳಿಕೆ ನೀಡಿದ್ದಾರೆ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು