ರಾಜ್ಯ ಬಿಜೆಪಿಯಲ್ಲಿ  ಆಂತರಿಕ ಕಚ್ಚಾಟ ಮುಂದುವರೆದಿದೆ. ಪದಾಧಿಕಾರಿಗಳ ಬದಲಾವಣೆ ಆಗದಕ್ಕೆ ಈಶ್ವರಪ್ಪ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 27 ರಂದು ಬೆಂಗಳೂರಿನಲ್ಲಿ ಈಶ್ವರಪ್ಪ ನೇತೃತ್ವದಲ್ಲಿ ಅಸಮಾಧಾನಿತರ ಸಭೆ ನಡೆಸಲು ನಿರ್ಧರಿಸಲಾಗಿದೆ.

ಬೆಂಗಳೂರು (ಏ.20): ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಮುಂದುವರೆದಿದೆ. ಪದಾಧಿಕಾರಿಗಳ ಬದಲಾವಣೆ ಆಗದಕ್ಕೆ ಈಶ್ವರಪ್ಪ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 27 ರಂದು ಬೆಂಗಳೂರಿನಲ್ಲಿ ಈಶ್ವರಪ್ಪ ನೇತೃತ್ವದಲ್ಲಿ ಅಸಮಾಧಾನಿತರ ಸಭೆ ನಡೆಸಲು ನಿರ್ಧರಿಸಲಾಗಿದೆ.

ಮೇ 6 ರಂದು ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸುವ ಸಾಧ್ಯತೆಯಿದೆ. ಎರಡು ದಿನಗಳ ರಾಜ್ಯ ಭೇಟಿ ನೀಡಲಿದ್ದು ಮೇ.7 ರಂದು ಮೈಸೂರಿನಲ್ಲಿ ರಾಜ್ಯ ಬಿಜೆಪಿ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.

7 ಜಿಲ್ಲಾಧ್ಯಕ್ಷರ ಬದಲಾವಣೆಗೆ ಈಶ್ವರಪ್ಪ ಒತ್ತಾಯಿಸಿದ್ದರು. ಜೊತೆಗೆ ಪಧಾದಿಕಾರಿಗಳ ಬದಲಾವಣೆ ಮಾಡಲು ಹೈಕಮಾಂಡ್ ಮೊರೆ ಹೋಗಿದ್ದರು. ಬಳಿಕ ಬಿಎಸ್ವೈ ಬೀದರ್, ಬಳ್ಳಾರಿ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಿದ್ದರು. ಆದರೆ ಶಿವಮೊಗ್ಗ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಿರಲಿಲ್ಲ. ಶಿವಮೊಗ್ಗ ಪದಾಧಿಕಾರಿಯನ್ನು ಬದಲಾಯಿಸಬೇಕು ಎನ್ನುವ ಈಶ್ವರಪ್ಪ ಹಿಡನ್ ಅಜೆಂಡಾಗೆ ಯಡಿಯೂರಪ್ಪ ಸೊಪ್ಪು ಹಾಕಲಿಲ್ಲ. ಇದು ಈಶ್ವರಪ್ಪ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನು ಈಶ್ವರಪ್ಪ ಅಮಿತ್ ಶಾ ಗಮನಕ್ಕೆ ತರಲು ನಿರ್ಧಾರ ಮಾಡಿದ್ದಾರೆ.