ಲೈಂಗಿಕ ಸಂಬಂಧ : ಇಂಟೆಲ್ ಸಿಇಒ ರಾಜೀನಾಮೆ

First Published 22, Jun 2018, 10:09 AM IST
Intel CEO Brian Krzanich resigns over relationship with employee
Highlights

ಕಂಪನಿಯ ಮಹಿಳಾ ಸಿಬ್ಬಂದಿಯ ಜೊತೆ ಸಮ್ಮತಿಯ ಲೈಂಗಿಕ ಸಂಬಂಧ ಹೊಂದಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ತಂತ್ರಜ್ಞಾನ ಕಂಪನಿ ಇಂಟೆಲ್‌ನ ಸಿಇಒ ಬ್ರಿಯಾನ್ ಕ್ರಾನಿಚ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

ನ್ಯೂಯಾರ್ಕ್: ಕಂಪನಿಯ ಮಹಿಳಾ ಸಿಬ್ಬಂದಿಯ ಜೊತೆ ಸಮ್ಮತಿಯ ಲೈಂಗಿಕ ಸಂಬಂಧ ಹೊಂದಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ತಂತ್ರಜ್ಞಾನ ಕಂಪನಿ ಇಂಟೆಲ್‌ನ ಸಿಇಒ ಬ್ರಿಯಾನ್ ಕ್ರಾನಿಚ್ (58) ಗುರುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

ಅಲ್ಲದೆ ಅವರು ಕಂಪನಿಯ ಆಡಳಿತ ಮಂಡಳಿಯನ್ನೂ ತೊರೆದಿದ್ದಾರೆ. ಬ್ರಿಯಾನ್ 1982ರಲ್ಲಿ ಇಂಟೆಲ್ ಸೇರಿದ್ದರು. ಇವರು ಸಿಇಒ ಆದ ಬಳಿಕ ಕಂಪನಿಯ ಷೇರು ಮೌಲ್ಯ ಶೇ.120 ರಷ್ಟು ಏರಿಕೆ ಕಂಡಿತ್ತು.

loader