ನೀವು ವಾಟ್ಸಪ್ ಮತ್ತು ಇನ್ಸ್‌ಟಾಗ್ರಾಂ ಎರಡನ್ನೂ ಬಳಸುತ್ತಿದ್ದರೆ, ಫೇಸ್‌ಬುಕ್ ಶೀಘ್ರವೇ ನಿಮಗೆ ಹೊಸ ಆಯ್ಕೆಯೊಂದನ್ನು ನೀಡಲಿದೆ.

ನವದೆಹಲಿ(ಜ.08): ನೀವು ವಾಟ್ಸಪ್ ಮತ್ತು ಇನ್ಸ್‌ಟಾಗ್ರಾಂ ಎರಡನ್ನೂ ಬಳಸುತ್ತಿದ್ದರೆ, ಫೇಸ್‌ಬುಕ್ ಶೀಘ್ರವೇ ನಿಮಗೆ ಹೊಸ ಆಯ್ಕೆಯೊಂದನ್ನು ನೀಡಲಿದೆ. ಇನ್ಸ್ ಟಾಗ್ರಾಂ ಬಳಕೆದಾರರು ತಮ್ಮ ಇನ್ಸ್‌ಟಾಗ್ರಾಂ ಸ್ಟೋರಿಗಳನ್ನು ನೇರವಾಗಿ ವಾಟ್ಸಪ್‌ನಲ್ಲಿ, ವಾಟ್ಸಪ್ ಸ್ಟೇಟಸ್ ಆಗಿ ಬಳಸುವ ಅವಕಾಶವೊಂದನ್ನು ಸೃಷ್ಟಿಸಲು ಕಂಪನಿ ಪರಿಶೀಲನೆ ನಡೆಸುತ್ತಿದೆ.

ಇನ್ಸ್ ಟಾಗ್ರಾಂ ಮತ್ತು ವಾಟ್ಸಪ್ ಎರಡರಲ್ಲೂ ಪೋಸ್ಟ್ ಮಾಡುವವರಿಗೆ, ಇದು ಸಹಕಾರಿ. ಸದ್ಯಕ್ಕೆ ಇದು ಪ್ರಾಯೋಗಿಕ ಹಂತದಲ್ಲಿದ್ದು, ಆಯ್ದ ಕೆಲವು ಬಳಕೆದಾರರಿಗೆ ಮಾತ್ರ ಈ ಸೇವೆ ಲಭ್ಯವಿದೆ.