ಪರಿವರ್ತನಾ ರ್ಯಾಲಿ ಆರಂಭಕ್ಕೂ ಮುನ್ನ ಬಿಜೆಪಿ ನಾಯಕರು ಒಗ್ಗಟ್ಟಾಗಿದ್ದಾರೆ.
ಬೆಂಗಳೂರು (ಅ.11): ಪರಿವರ್ತನಾ ರ್ಯಾಲಿ ಆರಂಭಕ್ಕೂ ಮುನ್ನ ಬಿಜೆಪಿ ನಾಯಕರು ಒಗ್ಗಟ್ಟಾಗಿದ್ದಾರೆ.
ಅಮಾನತುಗೊಂಡ ಬಿಜೆಪಿ ನಾಯಕರಿಗೆ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ರಾಜ್ಯ ಮಟ್ಟದ ಕಾರ್ಯಕ್ರಮಗಳ ಅನುಷ್ಠಾನ ತಂಡದಿಂದ ಕೈಬಿಟ್ಟ ನಾಯಕರಿಗೆ ಮತ್ತೆ ಸ್ಥಾನ ನೀಡಲಾಗಿದೆ. ಆಧುನಿಕ ಪ್ರಚಾರ ತಂಡದಲ್ಲಿ ನಿರ್ಮಲಕುಮಾರ ಸುರಾನಾ, ಗಿರೀಶ್ ಪಟೇಲ್ ಗೆ ಸ್ಥಾನ ಕೊಡಲಾಗಿದೆ.
ಸಾಂಪ್ರದಾಯಿಕ ಪ್ರಚಾರ ತಂಡದಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಸೊಗಡು ಶಿವಣ್ಣ ಹಾಗೂ ಎಂ.ಬಿ. ನಂದೀಶ್ ಗೆ ಸ್ಥಾನ ನೀಡಲಾಗಿದ್ದರೆ ಬೂತ್ ಸಮಿತಿಗೆ ಮಾಜಿ ಸಹ ಕೋಶಾಧ್ಯಕ್ಷ ಕೇಶವಪ್ರಸಾದ್ ಗೆ ಸ್ಥಾನ ನೀಡಲಾಗಿದೆ.
ಭಿನ್ನಮತ ಮರೆತು ಒಗ್ಗಟ್ಟು ಪ್ರದರ್ಶನಕ್ಕೆ ಕಡೆಗೂ ಬಿಜೆಪಿ ಮುಂದಾಗಿದೆ. ಬೆಂಗಳೂರು ಸಮಾವೇಶ ಬಳಿಕ ರಾಜ್ಯಾದ್ಯಂತ ಸಂಚರಿಸಲಿರುವ ಯಾತ್ರೆಗೆ ಸಾಂಪ್ರದಾಯಿಕ ಪ್ರಚಾರ ತಂಡಕ್ಕೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ಸಾಂಪ್ರದಾಯಿಕ ಪ್ರಚಾರ ತಂಡದ ಸಂಚಾಲಕಿಯಾಗಿ ಸಂಸದೆ ಶೋಭಾ ಕರಂದ್ಲಾಜೆಗೆ ಜವಾಬ್ದಾರಿ ವಹಿಸಲಾಗಿದೆ. ಶೋಭಾ ಕರಂದ್ಲಾಜೆ ಯಾತ್ರೆಯ ಉಸ್ತುವಾರಿ ನೀಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಈ ಆದೇಶ ನೀಡಿದ್ದಾರೆ.
