Asianet Suvarna News Asianet Suvarna News

ಹೀಗೂ ಯಶಸ್ಸನ್ನು ಸಾಧಿಸಬಹುದೆಂದು ತೋರಿಸಿಕೊಟ್ಟ ಭಾರತೀಯರು

ಔಪಚಾರಿಕ ಶಿಕ್ಷಣ ಅಥವಾ ಪದವಿಗಳನ್ನು ಪಡೆಯದೇ ಜೀವನದಲ್ಲಿ ಸಾಧನೆಗೈದವರಿದ್ದಾರೆ. ಅವರ ಸಾಧನೆಗೆ ಜಗತ್ತೇ ತಲೆಬಾಗಿದೆ.  ಭಾರತದಲ್ಲಿ ಅಂತಹ ಹಲವಾರು ವ್ಯಕ್ತಿತ್ವಗಳನ್ನು ನಾವು ನೋಡುತ್ತೇವೆ.  ಶಾಲಾ ಶಿಕ್ಷಣ ಪೂರೈಸಿ, ಪದವಿ ಪಡೆದು, ಉತ್ತಮ ಅಂಕಗಳನ್ನು ಪಡೆದವರು ಸಾಧನೆ ಮಾಡಬಹುದು, ಮಾಡದೇ ಇರಬಹುದು. ಹಾಗೇನೆ, ಬೇರೆ ಬೇರೆ ರಂಗಳಲ್ಲಿ ಸಾಧನೆ ಮಾಡಿದವರು ಪದವಿಗಳನ್ನು ಅಥವಾ ಉತ್ತಮ ಅಂಕಗಳನ್ನು ಪಡೆದವರೇ ಆಗಬೇಕೆಂದಿಲ್ಲ. ವಿಜ್ಞಾನ-ತಂತ್ರಜ್ಞಾನವಾಗಿರಲಿ, ಕಲೆ, ವಾಣಿಜ್ಯ-ವ್ಯವಹಾರವಾಗಿರಲಿ ಅಥವಾ ರಾಜಕೀಯವಾಗಿರಲಿ ಎಲ್ಲಾ ಕ್ಷೇತ್ರಗಳಲ್ಲಿ ನಮಗೆ ಸಾಧಕರು ಕಾಣಸಿಗುತ್ತಾರೆ. ಕೆಲ ಉದಾಹರಣೆ ಇಲ್ಲಿದೆ..

Inspiring Indians
  • ಅಜೀಮ್ ಪ್ರೇಮ್’ಜಿ: ವಿಪ್ರೋ ಸ್ಥಾಪಕ  ಅಜೀಮ್ ಪ್ರೇಮ್’ಜಿ 21ನೇ ವಯಸ್ಸಿನಲ್ಲಿ ಕಾಲೇಜನ್ನು ಬಿಟ್ಟು ಕಂಪನಿಯನ್ನು ನಡೆಸಲು ಆರಂಭಿಸಿದವರು.
  • ಗೌತಮ್ ಅದಾನಿ: ದೇಶದ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ, ವ್ಯಾಪಾರ- ವಹಿವಾಟಿನಲ್ಲಿ ಇದ್ದ ಆಸಕ್ತಿಯಿಂದ  ಪದವಿ ಕೋರ್ಸನ್ನು ಅರ್ಧದಲ್ಲೇ ಮೊಟಕುಗೊಳಿಸಿದವರು.
  • ಕಪಿಲ್ ದೇವ್: ಭಾರತಕ್ಕೆ ವಿಶ್ವಕಪನ್ನು ಗೆದ್ದು ಕೊಟ್ಟ ಕಪಿಲ್ ದೇವ್ ಅರ್ಧದಲ್ಲೇ ಶಾಲಾ ಶಿಕ್ಷಣವನ್ನು ಮೊಟಕುಗೊಳಿಸಿದವರು
  • ಸಚಿನ್ ತೆಂಡೂಲ್ಕರ್:  ಕೇವಲ ದ್ವಿತೀಯ ಪಿಯುಸಿ ಓದಿರುವ ಸಚಿನ್ ಇಂದು ಜಗತ್ತಿನಾದ್ಯಂತ ಮನೆಮಾತಾಗಿದ್ದಾರೆ.
  • ಆಮಿರ್ ಖಾನ್: ಕೋಟ್ಯಾಂತರ ಜನ ಮನದಲ್ಲಿ ನಟನೆ ಮೂಲಕ ತನ್ನ ಛಾಪನ್ನು ಮೂಡಿಸಿರುವ ಆಮಿರ್ ಖಾನ್ ಓದಿದ್ದು ಬರೇ 12ನೇ ಕ್ಲಾಸ್ ಎಂದರೆ ನಂಬಲೇಬೆಕು. ಬಳಿಕ ತಮ್ಮ ಇಷ್ಟದ ನಟನಾ ರಂಗವನ್ನು ಆರಿಸಿಕೊಂಡವರು.
  • ಐಶ್ವರ್ಯ ರೈ: ತನ್ನ ಆರ್ಕಿಟೆಕ್ಟ್ ಕೋರ್ಸನ್ನು ಅರ್ಧಕ್ಕೆ ಬಿಟ್ಟು ಮಾಡೆಲಿಂಗ್’ನ್ನು ಆರಿಸಿಕೊಂಡು ಇಂದು ಸಿನೆಮಾರಂಗದ ಅತೀ ಪ್ರಮುಖ ನಟಿಗಳಲೊಬ್ಬರು
  • ಮೇರಿ ಕೋಮ್: ಒಲಿಂಪಿಕ್ಸ್’ನಲ್ಲಿ ಭಾರತದ ಹೆಸರನ್ನು ಪ್ರಕಾಶಿಸುವಂತೆ ಮಾಡಿದ  ಬಾಕ್ಸರ್ ಮೇರಿ ಕೋಮ್ ಅರ್ಧದಲ್ಲೇ ಶಾಲೆಯನ್ನು ಬಿಟ್ಟವರು. ಆದರೆ ಇತ್ತೀಚಿನ ವರ್ಷದಲ್ಲಿ ಶಿಕ್ಷಣವನ್ನು ಮುಂದುವರೆಸಿದ್ದಾರೆ.
  • ಸಲ್ಮಾನ್ ಖಾನ್: ಕೇವಲ ಶಾಲಾ ಶಿಕ್ಷಣ ಪೂರೈಸಿ ನಟನೆಯಲ್ಲಿ ತೊಡಗಿಸಿಕೊಂಡವರು.
  • ಅಕ್ಷಯ್ ಕುಮಾರ್: ಪದವಿಯನ್ನು ಅರ್ಧದಲ್ಲೆ ಬಿಟ್ಟು ಸಿನೆಮಾ ರಂಗಕ್ಕೆ ಕಾಲಿಟ್ಟವರು.
Follow Us:
Download App:
  • android
  • ios