ರಾಜ್ಯದ ಮಂತ್ರಿಯೊಬ್ಬರಿಗೆ ಇನ್ನೋವಾ ಕಾರು ಸಣ್ಣದಂತೆ.. ಫಾರ್ಚೂನರ್ ಅಥವಾ ಎಸ್ ಯುವಿ ಬೇಕಂತೆ..  ಈ ಸುದ್ದಿ ಕೇಳಿದ ತಕ್ಷಣ ಜಮೀರ್ ಅಹಮದ್ ಅವರದ್ದೇ ಎಂದು ನೀವು ತಕ್ಷಣಕ್ಕೆ ಹೇಳಿಬಿಡಬಹುದು. ಸಚಿವರು ಇದೀಗ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ.

ಬೆಂಗಳೂರು[ಜೂ.23] ರಾಜ್ಯದ ಮಂತ್ರಿಯೊಬ್ಬರಿಗೆ ಇನ್ನೋವಾ ಕಾರು ಸಣ್ಣದಂತೆ.. ಫಾರ್ಚೂನರ್ ಅಥವಾ ಎಸ್ ಯುವಿ ಬೇಕಂತೆ.. ಈ ಸುದ್ದಿ ಕೇಳಿದ ತಕ್ಷಣ ಜಮೀರ್ ಅಹಮದ್ ಅವರದ್ದೇ ಎಂದು ನೀವು ತಕ್ಷಣಕ್ಕೆ ಹೇಳಿಬಿಡಬಹುದು.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ದೊಡ್ಡ ಕಾರು ಕೇಳಿದ್ದೇನೆ ಎಂದಿದ್ದ ಜಮೀರ್ ಅದಕ್ಕೆ ಕಾರಣ ಏನು ಎಂಬುದಕ್ಕೆ ವಿವರಣೆಯನ್ನು ನೀಡಿದ್ದಾರೆ. ನಾನು ಮಂತ್ರಿ ಅಲ್ಲವೇ? ಸಣ್ಣ ಕಾರಿನಲ್ಲಿ ತಿರುಗಾಡಲು ಹೇಗೆ ಸಾಧ್ಯವಾಗುತ್ತದೆ? ಇನ್ನೋವಾ ಕೆಳ ದರ್ಜೆಯ ಕಾರು. ಸಚಿವರು ಬರುತ್ತಿದ್ದಾರೆ ಎಂದು ಜನರಿಗೆ ಗೊತ್ತಾಗುವುದು ಬೇಡವೇ? ಹಾಗಾಗಿ ದೊಡ್ಡ ಕಾರು ನೀಡಲು ವಿನಂತಿ ಮಾಡಿದ್ದೇನೆ ಎಂದು ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. 

ಮಂತ್ರಿಗಿರಿ ತೋರಿಸಲು ಜಮೀರ್‌ಗೆ ಫಾರ್ಚುನರ್ ಬೇಕಂತೆ!

ಈ ಹಿಂದೆ ವಿಕಾಸಸೌಧ ದಲ್ಲಿ ಮಾತನಾಡಿದ್ದ ಜಮೀರ್, ಫಾರ್ಚೂನರ್ ಕಾರ್ ಕೇಳಿದ್ದೇನೆ. ಆದರೆ ಸಿದ್ದರಾಮಯ್ಯ ಬಳಸಿದ ಕಾರೇ ಬೇಕು ಅಂತ ಕೇಳಿಲ್ಲ. ಸಚಿವ-ಮಂತ್ರಿ ಅಂದ ಮೇಲೆ ಕಾರು-ಗೀರು ಬೇಕಾಗುತ್ತದೆ. ನಾವು ಕುಮಾರಸ್ವಾಮಿ ಅವರಂತೆ ಪಾಪ್ಯುಲರ್ ಫೇಸ್ ಅಲ್ಲ ಎಂದು ಹೇಳಿ ಪರೋಕ್ಷವಾಗಿ ಎಚ್ಡಿಕೆಗೆ ಟಾಂಗ್ ನೀಡುವ ಯತ್ನ ಮಾಡಿದ್ದರು.

ಆದರೆ ಅವರ ಮಾತೆ ಅವರಿಗೆ ತಿರುಗುಬಾಣವಾಯಿತು. ಇದೀಗ ಮಾಧ್ಯಮಗಳು ನನ್ನ ಹೇಳಿಕೆ ತಿರುಚಿವೆ ಎಂದು ಹೇಳುತ್ತ ನಾನು ವಿನಂತಿ ಮಾಡಿಕೊಂಡಿದ್ದೇನೆ ಹೊರತು ಬೇಡಿಕೆ ಇಟ್ಟಿಲ್ಲ ಎಂದು ಹುಟ್ಟಿಕೊಂಡ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.