ಸ್ನೇಹಿತರೊಂದಿಗೆ ಹೊರಗಡೆ ಟೀ ಕುಡಿಯಲು ತೆರಳುತ್ತಿದ್ದಾಗ ಪುಸ್ತಕ ನೋಡುವ ನೆಪದಲ್ಲಿ ಮಾತನಾಡಿಸಿ ಮಸಿ ಎರಚಿ ನಂತರ ಹಲ್ಲೆ ಮಾಡಿ ಪರಾರಿಯಾದರು

ದಾವಣಗೆರೆ(ಮಾ.12): ಜಿಲ್ಲೆಯಲ್ಲಿ ಸಾಹಿತಿ ಪಿ.ಲಂಕೇಶ್ ಅವರ ಜನ್ಮ ದಿನಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಸಾಹಿತಿ ಯೋಗೀಶ್ ಮಾಸ್ಟ'ರ್ ಅವರ ಮೇಲೆ ಕಪ್ಪು ಮಸಿ ಎರಚಿದ್ದಾರೆ. ಸ್ನೇಹಿತರೊಂದಿಗೆ ಹೊರಗಡೆ ಟೀ ಕುಡಿಯಲು ತೆರಳುತ್ತಿದ್ದಾಗ ಪುಸ್ತಕ ನೋಡುವ ನೆಪದಲ್ಲಿ ಮಾತನಾಡಿಸಿ ಮಸಿ ಎರಚಿ ನಂತರ ಹಲ್ಲೆ ಮಾಡಿ ಪರಾರಿಯಾದರು. 'ಹೋಗುವಾಗ ಭಲೋಭಾರತ್ಮಾತಾಕೀಜೈ ಎಂದು ಕೂಗುತ್ತಿದ್ದರು' ಎಂದು ಯೋಗೀಶ್ ಮಾಸ್ಟರ್ ತಿಳಿಸಿದ್ದಾರೆ.