Asianet Suvarna News Asianet Suvarna News

ಪ್ರವಾಹ ಸಂತ್ರಸ್ತರಿಗೆ ಖುದ್ದು ಸಾಮಾಗ್ರಿ ಪ್ಯಾಕ್ ಮಾಡಿದ ಸುಧಾ ಮೂರ್ತಿ

ಕೊಡಗು ಹಾಗೂ ಕೇರಳ ನೆರೆ ಪ್ರವಾಹಕ್ಕೆ ಇಡೀ ದೇಶವೇ ಮರುಗಿದೆ. ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಿ, ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಇನ್ಫೋಸಿಸ್ ಫೌಂಡೇಷನ್ ಮೂಲಕ ಸದಾ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿರುವ ಸುಧಾ ಮೂರ್ತಿ ಅವರೂ ಎಂದಿನಂತೆ ಈಗಲೂ ಸಂತ್ರಸ್ತರಿಗೆ ಸಹಕರಿಸಿದ್ದಾರೆ. 

Infosys Sudhamurthy and team helps to Kodagu, Kerala flood victims
Author
Bengaluru, First Published Aug 21, 2018, 12:34 PM IST

ಬೆಂಗಳೂರು (ಆ. 21): ಕೊಡಗು ಹಾಗೂ ಕೇರಳ ನೆರೆ ಪ್ರವಾಹಕ್ಕೆ ಇಡೀ ದೇಶವೇ ಮರುಗಿದೆ. ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಿ, ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಇನ್ಫೋಸಿಸ್ ಫೌಂಡೇಷನ್ ಮೂಲಕ ಸದಾ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿರುವ ಸುಧಾ ಮೂರ್ತಿ ಅವರೂ ಎಂದಿನಂತೆ ಈಗಲೂ ಸಂತ್ರಸ್ತರಿಗೆ ಸಹಕರಿಸಿದ್ದಾರೆ. 

ಅಷ್ಟೇ ಅಲ್ಲ ಖುದ್ದು ಅವರೇ ನಿಂತು, ಅಗತ್ಯ ವಸ್ತುಗಳ ಪ್ಯಾಕಿಂಗ್ ಕಾರ್ಯದಲ್ಲಿ ತೊಡಗಿದ್ದು, ಈ ವೀಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.

 

ಇನ್ಫೋಸಿಸ್ ಫೌಂಡೇಷನ್ ಮೂಲಕ ಕಳುಹಿಸಬೇಕಾದ ಅಗತ್ಯ ವಸ್ತುಗಳನ್ನು ಸಿದ್ಧಪಡಿಸುತ್ತಿರುವ ಉದ್ಯೋಗಿಗಳೊಂದಿಗೆ ಸುಧಾ ಮೂರ್ತಿ ಅವರೂ ಮೇಲುಸ್ತುವಾರಿ ನೋಡಿಕೊಳ್ಳುವುದಲ್ಲದೇ, ತಾವೇ ಬಾಕ್ಸ್, ಬ್ಯಾಗ್‌ಗಳನ್ನು ಜೋಡಿಸುತ್ತಿದ್ದಾರೆ.  ಸದಾ ಸರಳ, ಸಜ್ಜನಿಕೆಗೆ ಹೆಸರಾದ ಸುಧಾ ಮೂರ್ತಿ ಅವರ ಈ ಕಾರ್ಯವನ್ನು ಜನರು ತುಂಬು ಮನಸ್ಸಿನಿಂದ ಶ್ಲಾಘಿಸಿದ್ದಾರೆ.

ಸುವರ್ಣ ನ್ಯೂಸ್ ಹಾಗೂ ಸುವರ್ಣ ನ್ಯೂಸ್.ಕಾಮ್ ಸಹ ಕೊಡಗು ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ್ದು, ಮಾಧ್ಯಮದ ಕರೆಗೆ ಕನ್ನಡಿಗರು ಉದಾರವಾಗಿ ದೇಣಿಗೆ ನೀಡಿ, ಸಹಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.


 

Follow Us:
Download App:
  • android
  • ios