ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ಕಂಪನಿ, ಬೆಂಗಳೂರು ಮೂಲದ ಇಸ್ಫೋಸಿಸ್‌, 13 ಸಾವಿರ ಕೋಟಿ ರು. ಹಣವನ್ನು ಷೇರುದಾರರಿಗೆ ಮರಳಿಸಲು ನಿರ್ಧರಿಸಿದೆ.

ಮುಂಬೈ/ಬೆಂಗಳೂರು(ಏ.14): ಕಂಪನಿಯ ಸಂಸ್ಥಾಪಕರು ಹಾಗೂ ಮಾಜಿ ಅಧಿಕಾರಿಗಳ ಒತ್ತಡಕ್ಕೆ ಮಣಿದಿರುವ ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ಕಂಪನಿ, ಬೆಂಗಳೂರು ಮೂಲದ ಇಸ್ಫೋಸಿಸ್‌, 13 ಸಾವಿರ ಕೋಟಿ ರು. ಹಣವನ್ನು ಷೇರುದಾರರಿಗೆ ಮರಳಿಸಲು ನಿರ್ಧರಿಸಿದೆ.

ಇಸ್ಫೋಸಿಸ್‌ನ ನಿರ್ದೇಶಕ ಮಂಡಳಿ ಆಡಳಿತ ವೈಫಲ್ಯ ಅನುಭವಿಸಿದೆ ಎಂದು ದೂರಿದ್ದ ಸಂಸ್ಥಾಪಕರು ಹಾಗೂ ಮಾಜಿ ಅಧಿಕಾರಿಗಳು, ಪ್ರತಿಸ್ಪರ್ಧಿ ಕಂಪನಿ ಟಿಸಿಎಸ್‌ ಕಳೆದ ಫೆಬ್ರವರಿಯಲ್ಲಿ ಘೋಷಣೆ ಮಾಡಿದ್ದಂತೆ ಇಸ್ಫೋಸಿಸ್‌ ಕೂಡ ಮಾರುಕಟ್ಟೆಯಿಂದ ಷೇರು ಮರು ಖರೀದಿ ಮಾಡಬೇಕು ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ 13 ಸಾವಿರ ಕೋಟಿ ರು.ನಷ್ಟುಮೊತ್ತವನ್ನು ಷೇರುದಾರರಿಗೆ ಹಿಂತಿರುಗಿಸಲು ನಿರ್ಧರಿಸಿದೆ. ಈ ಮಧ್ಯೆ, ಕಾರ್ಪೋರೆಟ್‌ ಆಡಳಿತ ಕುರಿತಾದ ಸಂಸ್ಥಾಪಕರ ಕಳವಳಗಳನ್ನು ಹೋಗಲಾಡಿಸಲು ರವಿ ವೆಂಕಟೇಶನ್‌ ಅವರನ್ನು ಸಹ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದೆ.