* ಇನ್ಫೋಸಿಸ್‌ ಸಂಸ್ಥೆಯ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ವಿಶಾಲ್‌ ಸಿಕ್ಕಾ ರಾಜೀನಾಮೆ* ಸಿಕ್ಕಾ ಅವರನ್ನು ಸಂಸ್ಥೆಯ ಎಕ್ಸಿಕ್ಯೂಟಿವ್ ವೈಸ್ ಚೇರ್ಮನ್ ಆಗಿ ನೇಮಕ ಮಾಡಲಾಗಿದೆ* ಸಿಕ್ಕಾ ಅವರಿಂದ ತೆರವಾದ ಎಂಡಿ, ಸಿಇಒ ಹುದ್ದೆಗೆ ಯು ಬಿ ಪ್ರವೀಣ್‌ರಾವ್‌ ನೇಮಕ* ಶೀಘ್ರದಲ್ಲೇ ಹೊಸ ಎಂಡಿ, ಸಿಇಒವನ್ನು ಆಡಳಿತ ಮಂಡಳಿ ಆಯ್ಕೆ ಮಾಡಲಿದೆ* ಈ ಸ್ಥಾನವನ್ನು ತೊರೆಯಲು ಇದು ಸೂಕ್ತ ಸಮಯ ಎಂದ ವಿಶಾಲ್​ ಸಿಕ್ಕಾ*  2014ರ ಜೂನ್ 12 ರಂದು ಸಿಕ್ಕಾ ಸಿಇಒ, ಎಂಡಿ ಆಗಿ ಅಧಿಕಾರ ವಹಿಸಿಕೊಂಡಿದ್ರು

ಬೆಂಗಳೂರು(ಆ. 18): ಇನ್‌'ಫೋಸಿಸ್‌'‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಗೆ ವಿಶಾಲ್‌ ಸಿಕ್ಕಾ ರಾಜೀನಾಮೆ ನೀಡಿದ್ದಾರೆ. ಯು.ಬಿ.ಪ್ರವೀಣ್‌ ರಾವ್‌ ಅವರನ್ನು ಹಂಗಾಮಿ ಸಿಇಓ ಆಗಿ ನೇಮಕ ಮಾಡಲಾಗಿದೆ ಎಂದು ಕಂಪನಿ ಕಾರ್ಯದರ್ಶಿ ಎ.ಜಿ.ಎಸ್‌. ಮಣಿಕಂಠ ತಿಳಿಸಿದ್ದಾರೆ. ಅಗಸ್ಟ್‌ 18 ರಂದು ಸಿಕ್ಕಾ ಅವರ ರಾಜೀನಾಮೆಯನ್ನು ಕಂಪೆನಿಯ ಬೋರ್ಡ್‌ ಮೀಟಿಂಗ್‌ನಲ್ಲಿ ಅಂಗೀಕರಿಸಲಾಗಿದೆ. ಸಿಕ್ಕಾ ಇನ್ನುಮುಂದೆ ಕಂಪೆನಿಯ ಉಪಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಮಣಿಕಂಠ ತಿಳಿಸಿದ್ದಾರೆ. 

ಇನ್ನು, ವಿಶಾಲ್​ ರಾಜೀನಾಮೆ ಬೆನ್ನಲ್ಲೇ ಇನ್ಫೋಸಿಸ್​ ಮುಖ್ಯಸ್ಥ ನಾರಾಯಣಮೂರ್ತಿ ವಾಗ್ದಾಳಿ ನಡೆಸಿದ್ದಾರೆ. ವಿಶಾಲ್​ ಸಿಕ್ಕಾ ಅವರು ಸಿಇಒ ಆಗುವ ಅರ್ಹತೆ ಅಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.