ಸಾಮಾನ್ಯವಾಗಿ ನಾವು ಉಸಿರಾಡುವಾಗ ಶೇ.21ರಷ್ಟು ಆಮ್ಲಜನಕ, ಕೆಂಪು ರಕ್ತಕಣದ ಮೂಲಕ ನಮ್ಮ ಇಡೀ ದೇಹಕ್ಕೆ ವಿತರಣೆಯಾಗುತ್ತದೆ.

ನಾನು 24 ವರ್ಷದ ವಿವಾಹಿತೆ. ಪತಿಗೆ 29 ವರ್ಷ. ಮದ್ವೆಯಾಗಿ ಮೂರು ವರ್ಷವಾದರೂ ಇನ್ನೂ ಮಕ್ಕಳಾಗಿಲ್ಲ. ನನ್ನಲ್ಲೇ ಸಮಸ್ಯೆಯಿದೆ ಎಂದು ತಿಳಿಯಿತು. ಹಲವು ಗೈನಕಾಲಜಿಸ್ಟ್‌ಗಳನ್ನು ಭೇಟಿಯಾದೆ. ಎಲ್ಲ ರೀತಿಯ ಚಿಕಿತ್ಸೆ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಹೈಪರ್ ಬೆರಿಕ್ ಆಕ್ಸಿಜನ್ ಥೆರಪಿಯನ್ನು ಒಬ್ಬರು ಸೂಚಿಸಿದ್ದಾರೆ. ಈ ಚಿಕಿತ್ಸೆ ಪರಿಣಾಮಕಾರಿಯೇ?

ಯಾವ ಕಾರಣಕ್ಕೆ ನಿಮಗೆ ಬಂಜೆತನ ಬಂದಿದೆ ಎಂಬುದನ್ನು ಪರೀಕ್ಷಿಸಿಯೇ, ಚಿಕಿತ್ಸೆ ಸೂಚಿಸಬೇಕು. ಆದರೆ, ನೀವು ಕೇಳಿದಂತೆ ಹೈಪರ್‌ಬೆರಿಕ್ ಆಕ್ಸಿಜನ್ ಥೆರಪಿ ಹಲವರಿಗೆ ವರದಾನ ಆಗಿರುವುದು ನಿಜ. ಹೈಪರ್ ಬೆರಿಕ್ ಆಕ್ಸಿಜನ್ ಚೇಂಬರ್ ಎಂಬ ವಿಶೇಷ ಕೊಠಡಿಯಲ್ಲಿ ಇದನ್ನು ಮಾಡುತ್ತೇವೆ. ಇಲ್ಲಿ ಪರಿಶುದ್ಧ ಆಮ್ಲಜನಕ ಇರುತ್ತದೆ. ಸಾಮಾನ್ಯವಾಗಿ ನಾವು ಉಸಿರಾಡುವಾಗ ಶೇ.21ರಷ್ಟು ಆಮ್ಲಜನಕ, ಕೆಂಪು ರಕ್ತಕಣದ ಮೂಲಕ ನಮ್ಮ ಇಡೀ ದೇಹಕ್ಕೆ ವಿತರಣೆಯಾಗುತ್ತದೆ. ಆದರೆ ಈ ಹೈಪರ್ ಬೆರಿಕ್ ಆಕ್ಸಿಜನ್ ಥೆರಪಿ ಮೂಲಕ ವ್ಯಕ್ತಿಗೆ ಶೇ.100ರಷ್ಟು ಆಮ್ಲಜನಕವನ್ನು ಪೂರೈಸಲಾಗುವುದು. ಅಗಾಧ ಆಮ್ಲಜನಕ ಪಡೆದ ಜೀವಕೋಶಗಳು ಕ್ರಿಯಾಶೀಲಗೊಳ್ಳುತ್ತವೆ. ರಕ್ತದ ಹರಿವಿಕೆಯನ್ನು ಸುಧಾರಿಸುತ್ತದೆ. ಪರ್ಯಾಯವಾಗಿ ಸಂತಾನೋತ್ಪತಿ ಹಾರ್ಮೋನ್‌ಗಳನ್ನು ಬಿಡುಗಡೆಗೊಳಿಸಲು ಉತ್ತೇಜಿಸುತ್ತವೆ. ಗರ್ಭಕೋಶಗ್ರಹಿಕೆಯಲ್ಲಿ ಸುಧಾರಣೆ ಹಾಗೂ ಮೊಟ್ಟೆಗಳನ್ನು ಸೇರಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಜೀವಕೋಶಗಳ ವಲಸೆ, ಪರಿಪಕ್ವತೆ ಮಾಡುವ ಮೂಲಕ ಬಂಜೆತನ ಹೋಗಲಾಡಿಸಲು ಹೆಚ್ಚು ಸಹಾಯಕಾರಿಯಾಗಿದೆ. ವೀರ್ಯಾಣು ಜೀವಕೋಶಗಳ ಉತ್ಪಾದನೆ ಹೆಚ್ಚಿಸುವಿಕೆ ಮೂಲಕ ಪುರುಷರಲ್ಲಿನ ಬಂಜೆತನಕ್ಕೂ ಇದು ಉತ್ತರವಾಗುತ್ತದೆ.

(ಕನ್ನಡಪ್ರಭ ವಾರ್ತೆ, ಡಾ. ವೃಂದಾ, ಲವಂತಿಕೆ ತಜ್ಞೆ)