ಆನೆಯೊಂದಿಗೆ ಇದೆಂಥಾ ಅಮಾನವೀಯ ವರ್ತನೆ?

Inflicting barbaric cruelty on elephants by a man in Jaipur
Highlights

ಮಾವುತನೊಬ್ಬನು ಆನೆಯನ್ನು ಅಮಾನವೀಯ ರೀತಿಯಲ್ಲಿ ಶಿಕ್ಷಸಿ, ಸರ್ಕಸ್‌ಗೆ ತರಬೇತಿ ನೀಡುತ್ತಿರುವ ಪರಿ ನೋಡಿದರೆ ಎಂಥವರಿಗೂ ಕೋಪ ಹೆಚ್ಚಾಗುವುದು ಸಹಜ.

ಜೈಪುರ: ಮಾವುತನೊಬ್ಬನು ಆನೆಯನ್ನು ಅಮಾನವೀಯ ರೀತಿಯಲ್ಲಿ ಶಿಕ್ಷಸಿ, ಸರ್ಕಸ್‌ಗೆ ತರಬೇತಿ ನೀಡುತ್ತಿರುವ ಪರಿ ನೋಡಿದರೆ ಎಂಥವರಿಗೂ ಕೋಪ ಹೆಚ್ಚಾಗುವುದು ಸಹಜ. ಹೊಡೆದು, ಬಡಿದು ಮಾಡುವ ಈ ಮಾವುತ ಈ ಆನೆಯನ್ನು ನಡೆಸಿಕೊಳ್ಳುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈತನ ದುರ್ನಡತೆ ಬೆಳಕಿಗೆ ಬಂದಿದೆ.ಜೈಪುರ ಮೂಲದ ಸವಿರ್ ಬಾಲು ಖಾನ್ ಆನೆಯೊಂದಿಗೆ ದುರ್ನಡತೆ ತೋರುತ್ತಿರುವ ಮಾವುತ. ವೈರಲ್ ಆದ ಪೋಸ್ಟ್‌ನಲ್ಲಿ ಆನೆ ಕಾಲನ್ನು ಕಟ್ಟಿದ್ದು, ಬೆಂಕಿಯಲ್ಲಿ ಕಾದ ಕೋಲಿನಿಂದ ಹೊಡೆಯುತ್ತಿರುವುದು ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ಕಳೆದ ಆರು ವರ್ಷಗಳಿಂದಲೂ ಇಂಥದ್ದೇ ಕೃತ್ಯವೆಸಗುತ್ತಿದ್ದ ಖಾನ್ ಕತ್ತಲ ಕೋಣೆಯೊಂದರಲ್ಲಿ ಆನೆಯನ್ನು ಇರಿಸಿ, ಸರ್ಕಸ್‌ಗೆ ಪಳಗಿಸುತ್ತಿದ್ದ. ನಂತರ ಸರ್ಕಸ್ ಕಂಪನಿಗಳಿಗೆ ಮಾರುತ್ತಿದ್ದ. ಈ ಆನೆಗೆ ಸುಮನ್ ಎಂದು ಹೆಸರಿಡಲಾಗಿತ್ತು.

ವಿಚಿತ್ರವಾಗಿ ಕಾಣೆಯಾಗುವ ಕಥೆಯುಳ್ಳ 'ವೇರ್ ದ ಎಲೆಫೆಂಟ್ ಸ್ಲೀಪ್ಸ್...' ಎಂಬ ಡಾಕ್ಯುಮೆಂಟರಿ 2006ರಲ್ಲಿ ಪ್ರಸಾರ ಮಾಡಲಾಗಿತ್ತು. ಆದರೆ, ಇದೀಗ ಸವಿರ್‌ನಂಥ ಮಾವುತರ ವಿಕೃತ ಕೃತ್ಯ ಬೆಳಕಿಗೆ ಬಂದಿದ್ದು, ಎಲ್ಲಿಂದಲೋ ಆನೆ ತಂದು, ಕದ್ದು ಮುಚ್ಚಿ ಸಾಕಿ ಮಾರುತ್ತಿದ್ದರೆಂಬುವುದು ಬಹಿರಂಗಗೊಂಡಿದೆ. 

ಆ ಆನೆ ಮರಿ ಸುಮನ್ ತಾಯಿ ಚಂದನಾ ಹಾಗೂ ಬಿಚ್ಲಿಯನ್ನೂ ಮಾರಲಾಗಿದೆ. ಸುಮನ್ ಮತ್ತು ಪೋಷಕರನ್ನು ರಕ್ಷಿಸಿದ್ದು, ಉತ್ತರಪ್ರದೇಶದಲ್ಲಿ ಬಿಡಲಾಗಿದೆ. 

 

loader