ಹಾವೇರಿಯ ವೀರಾಪುರ ಖಾಸಗಿ ಆಸ್ಪತ್ರೆಯಲ್ಲಿ ಪೋಷಕರಿಂದಲೇ ಮಗು ಎಸ್ಕೇಪ್ ಮಾಡಿದ ಕುರಿತು ಸುವರ್ಣ ನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಈಗ ಈ ಪ್ರಕರಣಕ್ಕೆ  ಸಂಬಂಧಪಟ್ಟಂತೆ ಹಲವು ಸಂಶಯಗಳು ವ್ಯಕ್ತವಾಗಿದೆ.

ಹಾವೇರಿ(ಅ.18): ಹಾವೇರಿಯ ವೀರಾಪುರ ಖಾಸಗಿ ಆಸ್ಪತ್ರೆಯಲ್ಲಿ ಪೋಷಕರಿಂದಲೇ ಮಗು ಎಸ್ಕೇಪ್ ಮಾಡಿದ ಕುರಿತು ಸುವರ್ಣ ನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಸಂಶಯಗಳು ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಗುವನ್ನು ಕದ್ದು ಮುಚ್ಚಿ ಎಸ್ಕೇಪ್ ಮಾಡುತ್ತಿರೋ ಎಕ್ಸ್ ಕ್ಲೂಸಿವ್ ದೃಶ್ಯಗಳು ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ. ಹೆರಿಗೆಯಾದ ಯುವತಿಯ ತಾಯಿ ಐಸಿಯುನಿಂದ ಮಗುವನ್ನು ಸೆರಗಿನಲ್ಲಿ ಮುಚ್ಚಿಕೊಂಡು ಹೊರಬರುತ್ತಾಳೆ. ಹಾಗೆ ಹೊರಬಂದ ಕೆಲವೇ ಸೆಕೆಂಡುಗಳಲ್ಲಿ ಅದೇ ಕೊಠಡಿಯಿಂದ ವೈದ್ಯನೊಬ್ಬ ನರ್ಸ್ ಜೊತೆ ಹೊರಬರ್ತಾರೆ, ಹೀಗಾಗಿ ಆ ವೈದ್ಯನ ಸಹಕಾರವೇನಾದ್ರೂ ಇದೆಯಾ ಎಂಬ ಸಂಶಯ ವ್ಯಕ್ತವಾಗಿದೆ.

ಇನ್ನು ಈ ವರದಿ ಕುರಿತು ಹಾವೇರಿ ಡಿಸಿ ಡಾ. ವೆಂಕಟೇಶ್ ಅವರ ಗಮನಕ್ಕೆ ಬಂದಿದ್ದು, ಪ್ರಕರಣ ನಿರ್ಲಕ್ಷವಹಿಸಿದ್ದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಅಂತಾ ಭರವಸೆ ನೀಡಿದ್ದಾರೆ. ಅಲ್ಲದೇ ಸುವರ್ಣ ನ್ಯೂಸ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ರು .