ಸೆರಿ ತಿನ್ನಿಸುವ ವೇಳೆ ಗಂಟಲಿಗೆ ಸಿಲುಕಿ 3 ತಿಂಗಳ ಮಗು ಸಾವು

First Published 31, Jan 2018, 11:41 AM IST
Infant Died
Highlights

ಸೆರಿ ಗಂಟಲಿಗೆ ಸಿಲುಕಿ‌ ಮೂರು ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಮಾಗಡಿಯ ಹೊಸಪಾಳ್ಯದಲ್ಲಿ ನಡೆದಿದೆ.

ಬೆಂಗಳೂರು (ಜ.31): ಸೆರಿ ಗಂಟಲಿಗೆ ಸಿಲುಕಿ‌ ಮೂರು ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಮಾಗಡಿಯ ಹೊಸಪಾಳ್ಯದಲ್ಲಿ ನಡೆದಿದೆ.

ಮಂಜುನಾಥ್-ಧನಲಕ್ಷ್ಮಿ ದಂಪತಿಯ ಹೆಣ್ಣು‌ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.  ಎಂದಿನಂತೆ ಬೆಳಗ್ಗೆ ಮಗುವಿಗೆ ತಾಯಿ ಸೆರಿ ತಿನ್ನಿಸುತ್ತಿದ್ದರು. ಚೆರಿ ಹಣ್ಣು ಗಂಟಲಿಗೆ ಸಿಲುಕಿದ ತಕ್ಷಣ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

 

loader