ಇಂದ್ರಾಣಿ ಮೇಡಂ ಕಾರಿನಲ್ಲಿ ಶೀನಾಳ ಮುಖದ ಮೇಲೆ ಕುಳಿತುಕೊಂಡು, ಎರಡೂ ಕೈಗಳಿಂದ ಆಕೆಯ ಕತ್ತುಹಿಸುಕಿ ಹತ್ಯೆ ಮಾಡಿದ್ದರು. ಈ ವೇಳೆ ಇದೀಗ ಆಕೆಗೆ ೩ ಬೆಡ್‌ರೂಂ ಫ್ಲ್ಯಾಟ್ ಸಿಕ್ಕಿತು ಎಂದು ವ್ಯಂಗ್ಯವಾಡಿದ್ದರು ಎಂದು ರಾಯ್ ಹೇಳಿದ್ದಾನೆ.

ಮುಂಬೈ(ಜು.29): ಇಂದ್ರಾಣಿ ಮುಖರ್ಜಿ ತನ್ನ ಮಗಳು ಶೀನಾ ಬೋರಾ ಮುಖದ ಮೇಲೆ ಕುಳಿತು, ಎರಡೂ ಕೈಗಳಿಂದ ಹತ್ಯೆ ನಡೆಸಿದ್ದರು ಎಂದು ಇಂದ್ರಾಣಿಯ ಕಾರು ಚಾಲಕ ಶ್ಯಾಮ್‌ವರ್ ರಾಯ್ ಶುಕ್ರವಾರ ಮುಂಬೈ ಕೋರ್ಟ್‌ಗೆ ಸಾಕ್ಷ್ಯ ನುಡಿದಿದ್ದಾನೆ.

ಇಂದ್ರಾಣಿ ಮೇಡಂ ಕಾರಿನಲ್ಲಿ ಶೀನಾಳ ಮುಖದ ಮೇಲೆ ಕುಳಿತುಕೊಂಡು, ಎರಡೂ ಕೈಗಳಿಂದ ಆಕೆಯ ಕತ್ತುಹಿಸುಕಿ ಹತ್ಯೆ ಮಾಡಿದ್ದರು. ಈ ವೇಳೆ ಇದೀಗ ಆಕೆಗೆ ೩ ಬೆಡ್‌ರೂಂ ಫ್ಲ್ಯಾಟ್ ಸಿಕ್ಕಿತು ಎಂದು ವ್ಯಂಗ್ಯವಾಡಿದ್ದರು ಎಂದು ರಾಯ್ ಹೇಳಿದ್ದಾನೆ.

ಜೊತೆಗೆ ಕಾಡಿಗೆ ತೆರಳಿದ ಬಳಿಕ ಇಂದ್ರಾಣಿ ಸ್ವತಃ ಬೆಂಕಿಪೆಟ್ಟಿಗೆ ತೆಗೆದುಕೊಂಡು, ಶೀನಾಳ ಮೃತದೇಹಕ್ಕೆ ಬೆಂಕಿ ನೀಡಿದ್ದಳು ಎಂದೂ ರಾಯ್ ತಿಳಿಸಿದ್ದಾನೆ. ಶೀನಾ, ತನ್ನ ತಾಯಿ ಇಂದ್ರಾಣಿ ಬಳಿ ೩ ಬೆಡ್‌ರೂಂನ ಫ್ಲ್ಯಾಟ್‌ಗೆ ಬೇಡಿಕೆ ಇಟ್ಟಿದ್ದ ಅಂಶವೇ ಆಕೆಯ ಕೊಲೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು.