Asianet Suvarna News Asianet Suvarna News

ಇಂಡೋನೇಷ್ಯಾ ಚರ್ಚ್ ದಾಳಿ: 9 ವರ್ಷದ ಮಗು ಬಳಸಿಕೊಂಡ ದಂಪತಿ

ಇಂಡೋನೇಷ್ಯಾದ ಸುರಬಯಾ ನಗರದಲ್ಲಿ ಚರ್ಚ್‌ಗಳ ಮೇಲೆ ನಡೆದ ಆತ್ಮಾಹುತಿ ದಾಳಿಗೆ ಏಳು ಮಂದಿ ಬಲಿಯಾಗಿದ್ದಾರೆ. ಈ ದುಷ್ಕೃತ್ಯಕ್ಕೆ ದಂಪತಿಯೊಬ್ಬರು ತಮ್ಮ ನಾಲ್ವರು ಮಕ್ಕಳನ್ನು ಬಳಸಿದ್ದರೆಂಬುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Indonesian church bombings carried out by one family police say

ಜಕಾರ್ತ: ಇಂಡೋನೇಷ್ಯಾದ ಸುರಬಯಾ ನಗರದಲ್ಲಿ ಚರ್ಚ್‌ಗಳ ಮೇಲೆ ನಡೆದ ಆತ್ಮಾಹುತಿ ದಾಳಿಗೆ ಏಳು ಮಂದಿ ಬಲಿಯಾಗಿದ್ದಾರೆ. ಈ ದುಷ್ಕೃತ್ಯಕ್ಕೆ ದಂಪತಿಯೊಬ್ಬರು ತಮ್ಮ ನಾಲ್ವರು ಮಕ್ಕಳನ್ನು ಬಳಸಿದ್ದರೆಂಬುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಒಂಬತ್ತು ಹಾಗೂ 12 ವರ್ಷದ ಇಬ್ಬರ ಹೆಣ್ಣು ಮಕ್ಕಳು, ಇಬ್ಬರು ಹದಿವಯಸ್ಸಿನ ಗಂಡು ಮಕ್ಕಳನ್ನು ಈ ಮಾರಾಣಾಂತಿಕ ಕೃತ್ಯಕ್ಕೆ ಬಳಸಿಕೊಂಡಿದ್ದಾರೆ. ತಾಯಿ ಬಾಂಬ್ ಸ್ಫೋಟಿಸುವಾಗ ಇಬ್ಬರು ಹೆಣ್ಣು ಮಕ್ಕಳು ಆಕೆ ಜತೆಗಿದ್ದರೆಂದು ದೇಶದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹದಿವಯಸ್ಸಿನ ಇನ್ನಿಬ್ಬರು ಗಂಡು ಮಕ್ಕಳನ್ನು ಮತ್ತೊಂದು ಚರ್ಚ್‌ ಮೇಲಿನ ದಾಳಿಗೆ ಬಳಸಿಕೊಳ್ಳಲಾಗಿದೆ.  ಈ ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ, 40 ಮಂದಿ ಗಾಯಗೊಂಡಿದ್ದಾರೆ.

ಆತ್ಮಾಹುತಿ ದಾಳಿ ನಡೆಸಿದ ಆರು ಮಂದಿಯೂ ಕೊನೆಯುಸಿರೆಳೆದಿದ್ದಾರೆ. ಐಸಿಸ್‌ ಅನ್ನು ಬೆಂಬಲಿಸುವ ಉಗ್ರ ಸಂಘಟನೆಗೆ ಈ ಪೋಷಕರು ಸೇರಿದ್ದಾರೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹುತಾತ್ಮ ದಾಳಿ ಎಂದು ಕರೆದಿರುವ ಈ ಘಟನೆಗೆ ಐಸಿಸ್ ಹೊಣೆ ಹೊತ್ತು ಕೊಂಡಿದೆ. 
 

Follow Us:
Download App:
  • android
  • ios