ವರ್ಷಾಂತ್ಯಕ್ಕೆ ಮತ್ತೆ ನಿಸರ್ಗ ಮುನಿಸಿಕೊಂಡಿದೆ. ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟದ ನಂತರ ಸುನಾಮಿ ಸಂಭವಿಸಿದ್ದು, ಸುಮಾರು 222 ಜನರನ್ನು ಬಲಿ ತೆಗೆದುಕೊಂಡಿದೆ.
ಜಕಾರ್ತಾ[ಡಿ.23] ಜ್ವಾಲಾಮುಖಿ ಸ್ಫೋಟ ಸುನಾಮಿಯಾಗಿ ಬದಲಾಗಿದ್ದು ಇಂಡೋನೇಷಿಯಾಗೆ ಅಪ್ಪಳಿಸಿದೆ. ವಿನಾಶದ ಸುನಾಮಿ ಹೇಗೆ ಉಂಟಾಯಿತು ಎಂಬ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದ ಜನರ ಮೇಲೆ ಸುನಾಮಿ ಬಂದೆರಗಿದೆ. 'ಸೆವೆನ್ಟೀನ್' ಎಂಬ ಹೆಸರಿನ 'ಪಾಪ್ ಬ್ಯಾಂಡ್' ಟ್ಯಾಂಗ್ಗುಂಗ್ ಲೆಯುಂಗ್ ನಡುವಿನ ರೆಸಾರ್ಟ್‌ನಲ್ಲಿ ಲೈವ್ ಪ್ರದರ್ಶನದ ವೇಳೆ ಸುನಾಮಿ ಸಂಭವಿಸಿದೆ. ಹೊಸ ವರ್ಷ ಆಚರಿಸಲು, ಸುಮಾರು 200 ಜನರೊಂದಿಗೆ ಸರಿದ್ದರು. ಈ ವೇಳೆ ಇದ್ದಕ್ಕಿದಂತೆ ತೆರೆ ಬಂದು ಅಪ್ಪಳಿಸಿದೆ.
ಇಂಡೋನೆಷ್ಯಾದ ರಕ್ಕಸ ಅಲೆಗಳು..ಇಂಡಿಯಾಗೆ ಬರೋಕೆ ಎಷ್ಟು ಹೊತ್ತು?
ಅನಾಕ್ ಕ್ರಾಕಟೋ ಜ್ವಾಲಾಮುಖ ಸ್ಫೋಟಗೊಂಡಿದ್ದರಿಂದ ಸಮುದ್ರದಲ್ಲಿ ಬೃಹತ್ ಅಲೆ ಎದ್ದಿದ್ದು ಶನಿವಾರ ರಾತ್ರಿ 9.30ರ ಸುಮಾರು (ಸ್ಥಳೀಯ ಕಾಲಮಾನ) ತೀರ ಪ್ರದೇಶಕ್ಕೆ ಅಪ್ಪಳಿಸಿದೆ. ದಕ್ಷಿಣ ಸುಮಾತ್ರಾ ಮತ್ತು ಜಾವಾದ ಪಶ್ಚಿಮ ಭಾಗಕ್ಕೆ ಅಲೆಗಳು ಅಪ್ಪಳಿಸಿವೆ. ಡಿಸೆಂಬರ್ 25ರವರೆಗೂ ಇದೇ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
2004ರ ಸುನಾಮಿ: 2004ರ ಡಿಸೆಂಬರ್ 25ರಂದು ಅಪ್ಪಳಿಸಿದ್ದ ಬೃಹತ್ ಗಾತ್ರದ ತೆರೆಗಳು ಭಾರತದ ಮೇಲೂ ಪರಿಣಾಮ ಬೀರಿದ್ದವು. 14 ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆದಿದ್ದ ಸುನಾಮಿ 227,898 ಜನರನ್ನು ಬಲಿಪಡೆದಿತ್ತು.

