ಹೈಟೆಕ್ ಸಿಟಿ ಮಂದಿಗೆ ಕಡಿಮೆ ದರದಲ್ಲಿ ಉತ್ತಮ ಊಟ ಕೊಡಲು, ಇದೇ ಅಗಷ್ಟ್ 15 ರಂದು ಇಂದಿರಾ ಕ್ಯಾಂಟೀನ್  ಲೋಕಾರ್ಪಣೆಗೊಳ್ಳಲಿದೆ.

ಬೆಂಗಳೂರು(ಜೂ.10): ಹೈಟೆಕ್ ಸಿಟಿ ಮಂದಿಗೆ ಕಡಿಮೆ ದರದಲ್ಲಿ ಉತ್ತಮ ಊಟ ಕೊಡಲು, ಇದೇ ಅಗಷ್ಟ್ 15 ರಂದು ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಗೊಳ್ಳಲಿದೆ.

28 ವಿಧಾನಸಭಾ ಕ್ಷೇತ್ರದಲ್ಲಿ 200 ಕ್ಯಾಂಟೀನ್ ತೆರೆಯುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಪೂರ್ವ ನಿರ್ಮಿತ ಕಾಂಕ್ರಿಟ್ ಗೋಡೆ, ನೆಲ ಹಾಗೂ ಛಾವಣಿಗಳನ್ನು ಬಳಸಿ ಕೆಲವೇ ದಿನಗಳಲ್ಲಿ ಕಟ್ಟಡ ನಿರ್ಮಿಸಲಿದೆ. 24 ಚದರ ಅಡಿ ವಿಸ್ತೀರ್ಣದಲ್ಲಿ ಅಡುಗೆಕೋಣೆ, 12 ರಿಂದ 14 ಚದರ ಅಡಿ ವಿಸ್ತೀರ್ಣದಲ್ಲಿ ಕ್ಯಾಂಟೀನ್ ಇರಲಿದೆ. ಕಟ್ಟಡ ನಿರ್ಮಾಣಕ್ಕೆ 28 ಲಕ್ಷ ರೂ. ವೆಚ್ಚವಾಗುವುದೆಂದು ಮೇಯರ್ ಜಿ.ಪದ್ಮಾವತಿ ತಿಳಿಸಿದ್ದಾರೆ.

ತಮಿಳುನಾಡು ಕೃಷ್ಣಗಿರಿಯ ಕೆಫೆ ಸಂಸ್ಥೆಗೆ ಇಂದಿರಾ ಕ್ಯಾಂಟೀನ್ ಗುತ್ತಿಗೆ ನೀಡುವುದು ಅಂತಿಮವಾಗಿದ್ದು, ಇಂದು ಮೇಯರ್ ಪರಿಶೀಲನೆಗಾಗಿ ಕೃಷ್ಣಗಿರಿಗೆ ತೆರಳುವ ಸಾಧ್ಯತೆಗಳಿವೆ. ಕೆ.ಆರ್.ಮಾರುಕಟ್ಟೆಯಲ್ಲೂ ತಲೆ ಎತ್ತಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ, ಬೆಳಗಿನ ಉಪಹಾರ 5 ರೂ. ಹಾಗೂ ಮಧ್ಯಾಹ್ನದ ಊಟ 10 ರೂ.ಗೆ ನೀಡಲಾಗುತ್ತದೆ. ಎಲ್ಲಾ ಅಂದುಕೊಂಡಂತೆ ಆದರೆ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೀಯ ಯೋಜನೆ ಇನ್ನೆರಡು ತಿಂಗಳಲ್ಲಿ ಚಾಲನೆಗೆ ಬರಲಿದೆ.