ಇಂಡಿಗೋ, ಏರ್ ಇಂಡಿಯಾ ಅತ್ಯಂತ ಅಗ್ಗದ ವಿಮಾನ

IndiGo, Air India Express Among Top 5 Cheapest Airlines
Highlights

ಭಾರತದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೋ, ಅಗ್ಗದ ವಿಮಾನಯಾನ ಸೇವೆ ನೀಡುವ ವಿಶ್ವದ ಸಂಸ್ಥೆಗಳ ಪೈಕಿ ಟಾಪ್ 5 ರಲ್ಲಿ ಸ್ಥಾನ ಪಡೆದಿವೆ. 

ನವದೆಹಲಿ: ಭಾರತದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೋ, ಅಗ್ಗದ ವಿಮಾನಯಾನ ಸೇವೆ ನೀಡುವ ವಿಶ್ವದ ಸಂಸ್ಥೆಗಳ ಪೈಕಿ ಟಾಪ್ 5 ರಲ್ಲಿ ಸ್ಥಾನ ಪಡೆದಿವೆ. 

ಏರ್‌ಇಂಡಿಯಾ ಎಕ್ಸ್‌ಪ್ರೆಸ್ 2 ಮತ್ತು ಇಂಡಿಗೋ 5ನೇ ಸ್ಥಾನ ಪಡೆದಿದೆ. ಪ್ರತಿ ಕಿ.ಮೀ ದೂರಕ್ಕೆ ಸಂಸ್ಥೆಗಳು ವಿಧಿಸುವ ವೆಚ್ಚ ಆಧರಿಸಿ ಮೆಲ್ಬರ್ನ್ ಮೂಲದ ರೋಮ್‌  ರಿಯೋ ಎಂಬ ಸಂಸ್ಥೆ ಸಮೀಕ್ಷೆ ನಡೆಸಿ ಪಟ್ಟಿ ಬಿಡುಗಡೆ ಮಾಡಿದೆ.

ಒಟ್ಟಾರೆ 200 ಸಂಸ್ಥೆಗಳ ಪೈಕಿ ಏರ್ ಏಷ್ಯಾ ಎಕ್ಸ್ ಅಗ್ರಸ್ಥಾನದಲ್ಲಿದೆ. ಏರ್ ಏಷ್ಯಾ ಎಕ್ಸ್ ಪ್ರತಿ ಕಿ. ಮೀಗೆ 4.74 ರು.ಶುಲ್ಕ ವಿಧಿಸುತ್ತಿದ್ದರೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ೫.೪೫ರು. ಇಂಡಿಗೋ 6.77 ರು. ಶುಲ್ಕ ವಿಧಿಸುತ್ತಿದೆ. 

loader