ಪಾತಕಿ ದಾವೂದ್ ಮನೆ ಪತ್ತೆಯಾಯ್ತು

First Published 14, Mar 2018, 8:18 PM IST
Indias No 1 enemy Dawood Ibrahim tracked down on island near Pakistans Karachi
Highlights

ಇತ್ತೀಚಿಗಷ್ಟೆ ಭಾರತದಲ್ಲಿ ಬಂಧಿತನಾದ ದಾವೂದ್ ಆಪ್ತ ಸಹಚರ ಫಾರೂಕ್ ತಾಕ್ಲ  ಮಾಹಿತಿ ನೀಡಿದ್ದಾನೆ.

ನವದೆಹಲಿ(ಮಾ.14): ಭಾರತದ ನಂ 1 ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮನೆ ಕರಾಚಿಯಲ್ಲಿರುವುದು ಪತ್ತೆಯಾಗಿದೆ.

ಸುದ್ದಿ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದ್ದು, ಪಾಕ್ ಸರ್ಕಾರವು  ಪಾತಕಿಗೆ ಐಶಾರಾಮಿ ಸುರಕ್ಷಿತ ಮನೆಯನ್ನು ಒದಗಿಸಿದ್ದು, ಇದು ಕರಾವಳಿ ತೀರದ ಸನಿಹದಲ್ಲಿದೆ. ದಾವೂದ್ ವಾಸವಿರುವ ಮನೆಯು ಆತನಿಗೆ ಅಪಾಯವೊದಗಿದಾಗ ತಪ್ಪಿಸಿಕೊಳ್ಳಲು ಹೆಚ್ಚು ಅನುಕೂಲ ಕಲ್ಪಿಸಿದೆ.

ಇತ್ತೀಚಿಗಷ್ಟೆ ಭಾರತದಲ್ಲಿ ಬಂಧಿತನಾದ ದಾವೂದ್ ಆಪ್ತ ಸಹಚರ ಫಾರೂಕ್ ತಾಕ್ಲ  ಮಾಹಿತಿ ನೀಡಿದ್ದಾನೆ. ಪಾತಕಿ ತನಗೆ ಬೇಕಾದಾಗಲೆಲ್ಲ ದುಬೈಗೆ ಹೋಗಲು ನೆರವು ನೀಡುತ್ತಿದ್ದ.ಜವಾಬ್ದಾರಿಯನ್ನು ಈತನಿಗೆ ವಹಿಸಲಾಗಿತ್ತು.ಸಿಬಿಐ ತಾಕ್ಲನನ್ನು ಪ್ರಶ್ನಿಸಿದಾಗ ಈ ವಿಷಯವನ್ನು ಬಾಯಿಬಿಟ್ಟಿದ್ದಾನೆ. ಒಂದು ವೇಳೆ ಭಾರತ ಅಥವಾ ಇತರ ಅಂತರರಾಷ್ಟ್ರೀಯ ಸಂಸ್ಥೆ ಬಂಧಿಸಲು ಪಾಕಿಸ್ತಾನಕ್ಕೆ ಒತ್ತಡ ಹಾಕಿದಾಗ ಬೇರೆ ಕಡೆ ತಪ್ಪಿಸಿಕೊಳ್ಳಲು ಸುರಕ್ಷಿತವಾಗಿದೆ.

ಕರಾಚಿಯ ವಾಸಸ್ಥಳವು ಐಎಸ್ಐ ಸುರಕ್ಷಿತ ವಲಯದಲ್ಲಿದೆ. ಪ್ರತಿ ಮಾಹಿತಿಯನ್ನು ದಾವೂದ್'ಗೆ ರವಾನಿಸುತ್ತದೆ. ವಿಶೇಷ ತಂತ್ರಜ್ಞಾನದ ನೆರವಿರುವ ಸ್ಯಾಟಲೈಟ್ ಫೋನ್ ಮೂಲಕ ಐಎಸ್'ಐ'ನ ಉನ್ನತ ಅಧಿಕಾರಿಗಳು ಮಾತ್ರ ಈತನ ಸಂಪರ್ಕ ಹೊಂದಿದ್ದಾರೆ. ಬಂಧನದ ಅನಿವಾರ್ಯವಾದರೆ ಸಮುದ್ರದ ಮೂಲಕ ಐದಾರು ಗಂಟೆಗಳಲ್ಲಿ ದುಬೈ ತಲುಪುವುದು. ದುಬೈನಲ್ಲಿ ದಾವೂದ್ ಸುರಕ್ಷಿತ ವ್ಯವಸ್ಥೆಯ ಹೊಣೆಗಾರಿಕೆಯನ್ನು ಫಾರೂಕ್ ತಾಕ್ಲ ನಿರ್ವಹಿಸುವುದು ಪ್ರಮುಖ ಕೆಲಸವಾಗಿದೆ.

loader