ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೊಬೈಲ್‌ಗಳದ್ದೇ ಕಾರುಬಾರು | ಮಾರಾಟವಾದ ಚೀನಾ ಮೊಬೈಲ್‌ಗಳ ಒಟ್ಟು ಮೊತ್ತ ಎಷ್ಟು ಗೊತ್ತಾ? 

ನವದೆಹಲಿ (ಅ. 30): ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಪ್ರಾಬಲ್ಯ ಹೊಸದೇನಲ್ಲ. ಆದರೆ ಅದು ಯಾವ ಮಟ್ಟ ತಲುಪಿದೆ ಎಂದರೆ 2018 ರ ಹಣಕಾಸು ವರ್ಷದಲ್ಲಿ ಭಾರತೀಯರು ಇದುವರೆಗೆ 50,000 ಕೋಟಿ ರು. ಮೌಲ್ಯದ ಚೀನಾ ಕಂಪನಿಗಳ ಮೊಬೈಲ್ ಖರೀದಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ಸಿಯೋಮಿ, ಒಪ್ಪೋ, ವಿವೋ, ಆನರ್, ಲೆನೆವೋ, ಒನ್‌ಪ್ಲಸ್ ಸೇರಿದಂತೆ ಬಹುತೇಕ ಚೀನಾ ಕಂಪನಿಗಳು ಅಗ್ಗದ ದರದಲ್ಲಿ ಅತ್ಯಂತ ಹೆಚ್ಚಿನ ಸವಲತ್ತು ಒಳಗೊಂಡ ಮೊಬೈಲ್ ಬಿಡುಗಡೆ ಮೂಲಕ ಈ ಸಾಧನೆ ಮಾಡಿವೆ. ಭಾರತದಲ್ಲಿ ಚೀನಾ ಮೊಬೈಲ್ ಕಂಪನಿಗಳ ಪಾಲು ಕಳೆದ ವರ್ಷಕ್ಕಿಂತ ದ್ವಿಗುಣವಾಗಿದೆ.