ಆರೋಗ್ಯ ಕ್ಷೇತ್ರದಲ್ಲಾಗಿರುವ ಭಾರೀ ಸುಧಾರಣೆ ಪರಿಣಾಮ ಭಾರತೀಯ ನಾಗರಿಕರ ಸರಾಸರಿ ಜೀವಿತಾವಧಿಯು 49.7 ವರ್ಷದಿಂದ 68.7 ವರ್ಷಗಳಿಗೆ ಹೆಚ್ಚಾಗಿದೆ
ನವದೆಹಲಿ [ನ.02]: ದೇಶದ ಆರೋಗ್ಯ ಕ್ಷೇತ್ರದಲ್ಲಾಗಿರುವ ಭಾರೀ ಸುಧಾರಣೆ ಪರಿಣಾಮ ಭಾರತೀಯ ನಾಗರಿಕರ ಸರಾಸರಿ ಜೀವಿತಾವಧಿಯು 49.7 ವರ್ಷದಿಂದ 68.7 ವರ್ಷಗಳಿಗೆ ಹೆಚ್ಚಾಗಿದೆ ಎಂದು 2019 ರ ರಾಷ್ಟ್ರೀಯ ಆರೋಗ್ಯ ಪಾರ್ಶ್ವನೋಟದ ವರದಿ ಹೇಳಿದೆ.
1970 - 75 ರ ಅವಧಿಯಲ್ಲಿ ಭಾರತೀಯರ ಜೀವಿತಾವಧಿ 49.7 ವರ್ಷವಾಗಿತ್ತು. ಆದರೆ, ಇದು 2012 - 16 ನೇ ಸಾಲಿನ ಅವಧಿ ಯಲ್ಲಿ 68 .7ಕ್ಕೆ ಏರಿಕೆಯಾಗಿದೆ. ಈ ಪೈಕಿ ಪುರುಷರ ಜೀವಿತಾವಧಿ 67 . 4 ವರ್ಷವಾದರೆ, ಮಹಿಳೆಯರದ್ದು, 70 . 2 ವರ್ಷವಾಗಿದೆ.
ಜನನ, ಸಾವಿನ ಸಂಖ್ಯೆ ಇಳಿಕೆ:1991 ರಿಂದ 2017 ರವರೆಗೂ ಜನನ ಸಂಖ್ಯೆ ಮತ್ತು ಸಾವಿನ ಸಂಖ್ಯೆಯಲ್ಲೂ ಇಳಿಕೆ ಕಂಡಿದೆ. ಪ್ರತಿ 1000 ಮಂದಿಗೆ ಶೇ.20.2 ಮಂದಿ ಜನನ ಪ್ರಮಾಣ, ಪ್ರತಿ 1000 ಮಂದಿಗೆ ಶೇ.6.3ರಷ್ಟು ಮರಣ ಪ್ರಮಾಣ ದಾಖಲಾಗಿದೆ.
ಗಂಟೇಲಿ ಪೊಲೀಸ್ ತುರ್ತು ಸ್ಪಂದನೆ 112ಕ್ಕೆ ಬಂತು 50 ಸಾವಿರ ಕರೆ..!...
ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು ಜನನ ಮತ್ತು ಮರಣ ಪ್ರಮಾಣ ಕಂಡುಬಂದಿವೆ. 15 ರಿಂದ 59 ವರ್ಷದೊಳಗಿನ ಶೇ. 64 ಮಂದಿ ಆರ್ಥಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, 2016 ರ ಒಟ್ಟಾರೆ ಜನಸಂಖ್ಯೆ ಪೈಕಿ ಶೇ.27ರಷ್ಟು ಮಂದಿ 14 ವರ್ಷದ ಒಳಗಿದ್ದಾ
