ನವದೆಹಲಿ(ಫೆ.17): ಪುಲ್ವಾಮಾ ಭಯೋತ್ಪಾದಕ ದಾಳಿ ಇಡೀ ಭಾರತವನ್ನು ಒಗ್ಗೂಡಿಸಿದೆ. ಹುತಾತ್ಮರ ಬಲಿದಾನಕ್ಕೆ ಪ್ರತೀಕಾರ ಬೇಕು ಎಂಬ ಒಕ್ಕೊರಲಿನ ಧ್ವನಿ ದೇಶದ ಮೂಲೆ ಮೂಲೆಗಳಲ್ಲಿ ಮೊಳಗತೊಡಗಿದೆ.

ಇನ್ನು ಸಹೋದ್ಯೋಗಿಗಳನ್ನು ಕಳೆದುಕೊಂಡಿರುವ ಯೋಧರೂ ಕೂಡ ಆಕ್ರೋಶದ ಬೇಗುದಿಯಲ್ಲಿ ಬೇಯುತ್ತಿದ್ದು, ಸೇಡಿಗಾಗಿ ಕಾತರರಾಗಿದ್ದಾರೆ. ಅಲ್ಲದೇ ಉಗ್ರರನ್ನು ಬಿಡುವುದಿಲ್ಲ ಎಂಬ ಸಂದೇಶವನ್ನು ಈಗಾಗಲೇ ರವಾನಿಸಿದ್ದಾರೆ.

ಈ ಮಧ್ಯೆ ಕಳೆದ ಕೆಲವು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಯೋಧನೋರ್ವನ ಪದ್ಯವೊಂದು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಪಾಕಿಸ್ತಾನದ ವಿರುದ್ದ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದ ಸಮಯದಲ್ಲಿ ಯೋಧನೊಬ್ಬ ಬರೆದ ಪದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪದ್ಯದಲ್ಲಿ ಪಾಕಿಸ್ತಾನದ ಯೋಗ್ಯತೆಯನ್ನು ಯೋಧ ಸಾರಿ ಹೇಳಿದ್ದ.

"

ಪಾಕಿಗಳಿಗೆ 1947, 1965, 1971 ರ ಯುದ್ಧಗಳನ್ನು ನೆನಪು ಮಾಡಿಕೊಟ್ಟಿದ್ದ ಯೋಧ, ಹೇಗೆ ಈ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಲಾಯಿತು ಎಂಬುದನ್ನು ವಿವರಿಸಿದ್ದಾನೆ. ಅಲ್ಲದೇ ಬಾಂಗ್ಲಾ ಯುದ್ಧದ ಸಂದರ್ಭದಲ್ಲಿ ಶರಣಾದ 90 ಸಾವಿರ ಪಾಕಿಸ್ತಾನಿ ಯೋಧರನ್ನು ಮರಳಿ ಕೊಟ್ಟ ಘಳಿಗೆಯನ್ನೂ ನೆನಪಿಸಿದ್ದಾನೆ.

ಅಲ್ಲದೇ ಪಾಕಿಸ್ತಾನ ಅದೆಷ್ಟೇ ಉಗ್ರರನ್ನು ಕಾಶ್ಮೀರಕ್ಕೆ ನುಗ್ಗಿಸಲಿ ನಾವು ಹೆದರುವುದಿಲ್ಲ, ನಾವು ಬಗ್ಗುವುದಿಲ್ಲ ಎಂದು ಯೋಧ ಈ ವಿಡಿಯೋದಲ್ಲಿ ಗುಡುಗಿದ್ದಾನೆ. ಪದ್ಯದ ಕೊನೆಯಲ್ಲಿ ‘ಕಾಶ್ಮೀರ ತೋ ರಹೆಗಾ ಲೇಕಿನ್ ಪಾಕಿಸ್ತಾನ್ ನಹೀ ರಹೆಗಾ..’ ಎಂಬ ಸಾಲು ಪಾಕಿಸ್ತಾನದ ಮುಖಕ್ಕೆ ಹೊಡೆದಂತಿದೆ.