Asianet Suvarna News Asianet Suvarna News

ಸಂಸತ್‌ ಆಯ್ತು, ಇನ್ನು ರೈಲು ನಿಲ್ದಾಣಗಳಲ್ಲೂ ಪ್ಲಾಸ್ಟಿಕ್‌ಗೆ ನಿಷೇಧ!

50 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್‌ ಬಳಕೆ| ಸಂಸತ್‌ ಆಯ್ತು, ಇನ್ನು ರೈಲು ನಿಲ್ದಾಣಗಳಲ್ಲೂ ಪ್ಲಾಸ್ಟಿಕ್‌ಗೆ ನಿಷೇಧ| 

Indian Railways to ban single use plastics from October 2
Author
Bangalore, First Published Aug 22, 2019, 4:31 PM IST

ನವದೆಹಲಿ[ಆ.22]: ಮರು ಬಳಕೆ ಮಾಡಲಾಗದ ನೀರಿನ ಬಾಟಲಿಗಳು, ಕೈ ಚೀಲಗಳು ಮತ್ತಿತರ ಪ್ಲಾಸ್ಟಿಕ್‌ ವಸ್ತುಗಳನ್ನು ಸಂಸತ್ತಿನ ಆವರಣದಲ್ಲಿ ಬಳಸದಂತೆ ಲೋಕಸಭೆ ಆದೇಶಿಸಿದ ಬೆನ್ನಲ್ಲೇ, ಅಕ್ಟೋಬರ್‌ 2ರಿಂದ ಮರುಬಳಕೆಯಾಗದ ಯಾವುದೇ ರೀತಿಯ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಕೆ ಮಾಡದಿರುವ ನಿರ್ಧಾರವನ್ನು ರೈಲ್ವೆ ಇಲಾಖೆ ಕೈಗೊಂಡಿದೆ.

ಈ ಬಗ್ಗೆ ಬುಧವಾರ ಹೇಳಿಕೆ ಬಿಡುಗಡೆ ಮಾಡಿರುವ ರೈಲ್ವೆ ಇಲಾಖೆ, ‘ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆಯಂತೆ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವ ಸಲುವಾಗಿ ಮರು ಬಳಕೆ ಮಾಡಬಹುದಾದ ಚೀಲಗಳನ್ನು ಬಳಸಲು ಭಾರತೀಯ ರೈಲ್ವೆಯ ಸಿಬ್ಬಂದಿ ಹಾಗೂ ವರ್ತಕರು ಸಹಕಾರ ನೀಡಬೇಕು.

ಪಾಕ್‌ಗೆ ಸಂಚರಿಸುವ ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸೇವೆ ರದ್ದು ಮಾಡಿದ ಭಾರತ!

ಅಲ್ಲದೆ, ಅ.2ರ ಒಳಗಾಗಿ ಒಂದೇ ಬಾರಿ ಬಳಕೆ ಮಾಡಬಹುದಾದ ಹಾಗೂ 50 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಬೇಕು ಎಂದು ಎಲ್ಲ ರೈಲ್ವೆ ಘಟಕಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದೆ.

Follow Us:
Download App:
  • android
  • ios