ರೈಲುಗಳ ಮೇಲೆ ಕಾರ್ಗಿಲ್ ಯುದ್ಧದ ಸಾಹಸ ಚಿತ್ರಗಳು| ವಿನೈಲ್ ಸ್ಟಿಕ್ಕರ್ ಅಂಟಿಸಿ ಜನರಿಗೆ ಮಾಹಿತ| ವೀರಯೋಧರ ಸ್ಮರಣಾರ್ಥ ಈ ಕಾರ್ಯ
ನವದೆಹಲಿ[ಜು.16]: ಕಾರ್ಗಿಲ್ ವಿಜಯೋತ್ಸವದ 20 ನೇ ವರ್ಷಾಚರಣೆ ಅಂಗವಾಗಿ ಮತ್ತು ಯುದ್ಧದ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡಲು ದೆಹಲಿ- ವಾರಾಣಸಿ ಕಾಶಿ ವಿಶ್ವನಾಥ ಎಕ್ಸ್‌ಪ್ರೆಸ್ ರೈಲಿಗೆ ಕಾರ್ಗಿಲ್ ಯುದ್ಧದ ಘಟನೆಗಳು ಮತ್ತು ಸೈನಿಕರ ಸಾಹಸಮಯ ಚಿತ್ರಗಳನ್ನು (ವಿನೈಲ್ ಸ್ಟಿಕ್ಕರ್)ಅಂಟಿಸಲಾಗಿದೆ.
ಕೇಂದ್ರ ಆರೋಗ್ಯ ಖಾತೆ ಸಚಿವ ಹರ್ಷವರ್ಧನ್, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ರೈಲು ಓಡಾಟಕ್ಕೆ ಸೋಮವಾರ ಚಾಲನೆ ನೀಡಿದರು. ಈ ವೇಳೆ ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಗಿಲ್ ಯುದ್ಧದ ರೋಚಕ ಘಟನೆಗಳು ಮತ್ತು ಸೈನಿಕರ ಸಾಹಸಗಳನ್ನು ಜನಸಾಮಾನ್ಯರಿಗೆ ತಿಳಿಸಲು ಬ್ರಹ್ಮಪುತ್ರ ಮೇಲ್, ಸೀಮಾಂಚಲ್ ಎಕ್ಸಪ್ರೆಸ್, ಗೊಂಡ್ವಾನಾ ಎಕ್ಸಪ್ರೆಸ್, ಗೋವಾ ಸಂಪರ್ಕ ಕ್ರಾಂತಿ ಎಕ್ಸಪ್ರೆಸ್ ಸೇರಿ 10 ರೈಲುಗಳಿಗೆ ಈ ರೀತಿಯಾದ ಚಿತ್ರ ಅಂಟಿಸಲಾಗುತ್ತಿದೆ. ಈ ಪೈಕಿ ಕಾಶಿ ವಿಶ್ವನಾಥ ಎಕ್ಸಪ್ರೆಸ್ ರೈಲು ಮೊದಲನೆಯದಾಗಿದೆ.
