Asianet Suvarna News Asianet Suvarna News

ನಮ್ಮದೇ ತಪ್ಪು.. ಮಹತ್ವದ ಸವಲತ್ತು ಕಡಿತ ಮಾಡಿದ ರೈಲ್ವೆ ಇಲಾಖೆ

ಸಾರ್ವಜನಿಕ ಆಸ್ತಿಗಳನ್ನು ಶುಚಿಯಾಗಿ ಇಟ್ಟುಕೊಳ್ಳದ್ದಕ್ಕೆ ನಮಗೆ ನಾವೇ ಶಿಕ್ಷೆ ಕೊಟ್ಟಿಕೊಂಡಂತಾಗಿದೆ. ಭಾರತೀಯ ರೈಲ್ವೆ ಪ್ರಯಾಣಿಕರಿಗೆ ನೀಡಿದ್ದ ಸವಲತ್ತೊಂದನ್ನು ಕಡಿತ ಮಾಡಲು ಮುಂದಾಗಿದೆ.

Indian Railways plans to remove curtains in AC coaches
Author
Bengaluru, First Published Oct 15, 2018, 10:14 PM IST

ನವದೆಹಲಿ[ಅ.15] ಭಾರತೀಯ ರೈಲ್ವೆ ಇಲಾಖೆಗೆ ಈಗ 2ಎಸಿ ಕೋಚ್ ಗಳಲ್ಲಿ ಅಳವಡಿಸಿರುವ ಕರ್ಟನ್ ಗಳನ್ನು ಶುಚಿಗೊಳಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಇನ್ನು ಮುಂದೆ ಕರ್ಟನ್ ತೆಗೆಯಲಾಗುವುದು  ಎಂದು ಹೇಳಿದೆ.

ಪ್ರಯಾಣಿಕರ ಖಾಸಗಿತನಕ್ಕೆ ಒತ್ತು ಕೊಟ್ಟು, ಈ ಸೌಲಭ್ಯ ನೀಡಿದ್ದರೆ, ಹೆಚ್ಚಿನವರು ಇದನ್ನು ಕರವಸ್ತ್ರ, ಟವೆಲ್ ಇಲ್ಲವೇ ಶೂ ಒರೆಸಲು ಬಳಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಸಹ ರೈಲ್ವೆ ಇಲಾಖೆಯ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನು ಹೊತ್ತೊಯ್ದಿದ್ದು ಸುದ್ದಿಯಾಗಿತ್ತು.

ಬೆಂಗಳೂರು-ನಾಂದೇಡ್ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ ಅವಘಡ ಆದ ಮೇಲೆ 2014ರಲ್ಲಿ ಎಸಿ3 ವಿಭಾಗದಲ್ಲಿ ಕರ್ಟನ್ ತೆಗೆಯಲಾಗಿತ್ತು. ಅನೇಕ ಸಾರಿ ಎಚ್ಚರಿಕೆ ಮತ್ತು ಸೂಚನೆ ನೀಡಿದ್ದರೂ ಜನರು ಬುದ್ಧಿ ಕಲಿತಿಲ್ಲ.

ಭಾರತ ಕಂಡ 4 ಅತಿದೊಡ್ಡ ರೈಲು ದರೋಡೆಗಳು..ಒಟ್ಟು ಮೌಲ್ಯ!

ತೀರಾ ಖಾಸಗಿತನ ಬಯಸುವ ಪ್ರಯಾಣಿಕರು 1 ಎಸಿ ಮೂಲಕ ಪ್ರಯಾಣಿಸುತ್ತಾರೆ. ಅಲ್ಲಿ ಅವರಿಗೆ ಹೇಗೂ ಕ್ಯಾಬಿನ್ ವ್ಯವಸ್ಥೆ ಇರುವುದರಿಂದ ಖಾಸಗಿತನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಅದೇ ಕೊಳಕಾದ ಕರ್ಟನ್ ಗಳಿಂದ ಪ್ರಯಾಣಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದರಿಂದ ಕರ್ಟನ್ ತೆರವುಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.

 

Follow Us:
Download App:
  • android
  • ios