Asianet Suvarna News Asianet Suvarna News

ಭಾರತ ಕಂಡ 4 ಅತಿದೊಡ್ಡ ರೈಲು ದರೋಡೆಗಳು..ಒಟ್ಟು ಮೌಲ್ಯ!

ಇಡೀ ಭಾರತೀಯರು ತಲೆ ತಗ್ಗಿಸುವಂಥ ಕೆಲಸವನ್ನು ಭಾರತೀಯರೆ ಮಾಡಿದ್ದಾರೆ. ಭಾರತೀಯ ರೈಲ್ವೆಯಲ್ಲಿ  ನಮ್ಮ ವಸ್ತುಗಳನ್ನು ನಾವೇ ಕದ್ದ ಲೆಕ್ಕ ನೋಡಿ ನಾವೇ ಬೆಚ್ಚಿ ಬಿದ್ದಿದ್ದೇವು!

Four Incidents Of Passengers Stealing Indian Railways Property
Author
Bengaluru, First Published Oct 5, 2018, 7:44 PM IST

ಭಾರತೀಯ ರೈಲ್ವೆಗೆ ಸೇರಿದ್ದ ಹಾಸಿಗೆ ವಸ್ತ್ರಗಳು, ದಿಂಬು, ಸೀಟು, ಸೋಪು ಎಲ್ಲವನ್ನು ಬ್ಯಾಗಿಗೆ ತುಂಬಿಕೊಂಡು ಬಂದ ಸುದ್ದಿಯ ಒಟ್ಟು ಮೌಲ್ಯ ಕೇಳಿದ್ರೆ ತಲೆ ತಿರುಗುತ್ತದೆ. 1.95 ಲಕ್ಷ ಟವೆಲ್, 81,736 ಬೆಡ್ ಶೀಟ್, 55,573 ಪಿಲ್ಲೋ ಕವರ್ .. ಅಬ್ಬಬ್ಬಾ ಲೆಕ್ಕ ಮುಂದುವರಿಯುತ್ತದೆ. ಹಾಗಾದರೆ ನಾವೇ ದರೋಡೆ ಮಾಡಿದ ಪ್ರಮುಖ 4 ರೈಲುಗಳ ಕತೆ  ಇಲ್ಲಿದೆ.

1. ತೇಜಸ್ ಎಕ್ಸ್ ಪ್ರೆಸ್: ಮುಂಬೆ-ಗೋವಾ ಮಾರ್ಗದಲ್ಲಿ ಸಂಚರಿಸಿವ ಮೊಟ್ಟ ಮೊದಲ ಹೈ ಸ್ಪೀಡ್ ರೈಲು ಎಂಬ ಖ್ಯಾತಿ ಪಡೆದುಕೊಂಡಿದ್ದ ತೇಜಸ್ ನನ್ನು ನಾವೇ ಹರಿದು ಮುಕ್ಕಿದ್ದೇವು. ವಿದೇಶದ ಅನುಭವ ನೀಡುವ ಉದ್ದೇಶದಿಂದ ಅಳವಡಿಕೆ ಮಾಡಿದ್ದ ಅತ್ಯಾಧುನಿಕ ಹೆಡ್ ಪೋನ್, ಎಲ್ ಸಿಡಿ ಪರದೆ ಎಲ್ಲವನ್ನು ಒಂದೇ ದಿನದಲ್ಲಿ ಹಾನಿ ಮಾಡಲಾಗಿತ್ತು. ಕಳ್ಳತನವಾದವಕ್ಕೂ ಲೆಕ್ಕವಿಲ್ಲ

2. ಪಂಚವಟಿ ಎಕ್ಸ್‌ ಪ್ರೆಸ್:  ಮೇಲ್ದರ್ಜೆಗೆ ಏರಿದ ರೈಲಿನ ಮೇಲೆ ಅತ್ಯಾಚಾರ ಮಾಡಲಾಗಿತ್ತು. ಸಾವಿರಕ್ಕೂ ಅಧಿಕಕ ಲೋಹದ ಕೈಪಟ್ಟಿಗಳು, 513 ಟೇಬಲ್ ಗಳು, 179 ಹೋಲ್ಡರ್ ಗಳು, ಪರದೆಗಳು, ಪ್ರಥಮ ಚಿಕಿತ್ಸಾ ಡಬ್ಬಿ, ಬಾತ್ ರೂಂನ ಬಕೇಟ್‌ಗಳು, 25 ನಲ್ಲಿಗಳು, 37 ಫ್ಲಶ್ ವಾಲ್, 17 ಕಸದ ಡಬ್ಬಿ, 15 ಕನ್ನಡಿ, 23 ಬಾಗಿಲುಗಳು ಮಂಗಮಾಯವಾಗಿದ್ದವು.

3. ಮುಂಬೈ-ಅಹಮದಾಬಾದ್ ಶತಾಬ್ಧಿ ಎಕ್ಸ್ ಪ್ರೆಸ್: ಈ ರೈಲಿನಲ್ಲಿ ಅನುಭೂತಿ ಕೋಚ್ ಗಳ ಅಳವಡಿಕೆ ಮಾಡಿದ್ದನ್ನು ನಮ್ಮ ನಾಗರಿಕರು ಹಬ್ಬ ಮಾಡಿಕೊಂಡರು. ಎಲ್ ಸಿಡಿ ಪರಧೆ, ಹೆಡ್ ಫೋನ್, ಕರೆಂಟ್ ಸ್ವಿಚ್ ಗಳು ಎಲ್ಲವನ್ನು ಕದ್ದು ಓಡಿಹೋಗಲಾಗಿತ್ತು.

4. ಇಂಜಿನಿಯರಿಂಗ್ ವಸ್ತುಗಳ ಕಳ್ಳತನ: ಇಂಜಿನಿಯರಿಂಗ್ ಗೆ ಸೇರಿದ ವಸ್ತುಗಳ ಮೇಲೆ ನಮಗೆ ಎಂಥಾ ಮೋಹವೋ ಗೊತ್ತಿಲ್ಲ. ಕೇಬಲ್ ಗಳು, ಸೋಲಾರ್ ಪ್ಲೇಟ್ಸ್, ಟೆಲಿಫೋನ್, ವಾಶ್ ಬೆಸಿನ್, ಕನ್ನಡಿ, ಟ್ಯಾಪ್ ಗಳದ್ದೇ ದೊಡ್ಡ ಲೆಕ್ಕ ಇದೆ. ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಇವಕ್ಕೆ ಒಂದಿಷ್ಟು ಬೆಲೆ ಸಿಗುತ್ತದೆ ಎಂದು ಸರಕಾರ ನಮಗೆ ಕೊಟ್ಟಿದ್ದ ಸೌಲಭ್ಯಗಳನ್ನು ಮಾರಿಕೊಂಡು ತಿಂದ ನೈಜ ಕತೆ ಅರಗಿಸಿಕೊಳ್ಳಬೇಕಾಗಿದೆ.

Follow Us:
Download App:
  • android
  • ios