ವಿಶ್ವದ ಅತಿದೊಡ್ಡ ಸಾರಿಗೆ ಸಂಪರ್ಕ ಜಾಲಗಳಲ್ಲಿ ಒಂದೆಂಬ ಖ್ಯಾತಿ ಪಡೆದ ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ 89,000 ಉದ್ಯೋಗಗಳಿಗೆ 1.50 ಕೋಟಿ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.

ನವದೆಹಲಿ: ವಿಶ್ವದ ಅತಿದೊಡ್ಡ ಸಾರಿಗೆ ಸಂಪರ್ಕ ಜಾಲಗಳಲ್ಲಿ ಒಂದೆಂಬ ಖ್ಯಾತಿ ಪಡೆದ ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ 89,000 ಉದ್ಯೋಗಗಳಿಗೆ 1.50 ಕೋಟಿ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.

ಇಲಾಖೆಯಲ್ಲಿನ ಸಿ ಗ್ರೂಪ್‌ನಲ್ಲಿ 26,502 ಮತ್ತು ಡಿ ಗ್ರೂಪ್‌ನಲ್ಲಿ 62,907 ಹುದ್ದೆಗಳು ಖಾಲಿಯಿದ್ದು, ಅವುಗಳ ಭರ್ತಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿತ್ತು.

ಇದರಲ್ಲಿ ಇದುವರೆಗೂ 1.50 ಕೋಟಿ ಮಂದಿ ಪ್ರಾಥಮಿಕ ನೋಂದಣಿ ಮಾಡಿಕೊಂಡಿದ್ದಾರೆ. ಅರ್ಜಿ ಸಲ್ಲಿಕೆಗೆ ಮಾ.31 ಕೊನೆಯ ದಿನ. ಈ ಹುದ್ದೆಗಳಿಗೆ ಪರೀಕ್ಷೆಯನ್ನು ಏಪ್ರಿಲ್ ಅಥವಾ ಮೇನಲ್ಲಿ ನಡೆಸಲಾಗುತ್ತದೆ.