ನವದೆಹಲಿ[ಜ.10]: ಭಾರತೀಯ ರೈಲ್ವೆ ಇಲಾಖೆ ತನ್ನ ಸಂಪರ್ಕ ಜಾಲದಲ್ಲಿ ಮಾನವ ರಹಿತ ರೈಲ್ವೆ ಕ್ರಾಸಿಂಗ್‌ ಅಭಿವೃದ್ಧಿಪಡಿಸುವಲ್ಲಿ ಗುರಿಯ ಅತ್ಯಂತ ಸಮೀಪಕ್ಕೆ ಬಂದಿದೆ.

ಬುಧವಾರ ಈ ಬಗ್ಗೆ ಮಾಹಿತಿ ನೀಡಿರುವ ಇಲಾಖೆ ಅಧಿಕಾರಿಗಳು, ಅಲಹಾಬಾದ್‌ ವಲಯ ವ್ಯಾಪ್ತಿಯಲ್ಲಿನ ಒಂದನ್ನು ಹೊರತು ಪಡಿಸಿ ದೇಶದ 3,478 ರೈಲ್ವೆ ಕ್ರಾಸಿಂಗ್‌ಗಳು ಮಾನವ ರಹಿತ ನಿರ್ವಹಣೆ ಹೊಂದಿದೆ. ಅಲ್ಲದೆ, ಕಳೆದೊಂದು ವರ್ಷದ ಅವಧಿಯಲ್ಲಿ ಇಲಾಖೆಯ ದೊಡ್ಡ ಸಾಧನೆ ಇದಾಗಿದ್ದು, ಸಾವಿನ ಸಂಖ್ಯೆಯಲ್ಲೂ ಗಣನೀಯ ಇಳಿಕೆಯಾಗಿದೆ. ಬಾಕಿ ಉಳಿದ ಒಂದು ಕ್ರಾಸಿಂಗ್‌ ಕೂಡ ಶೀಘ್ರದಲ್ಲೇ ಮಾನವ ರಹಿತಗೊಳಿಸಲಾಗುವುದು.

2009-2010ರ ಅವಧಿಯಲ್ಲಿ 930 ಕ್ರಾಸಿಂಗ್‌ಗಳನ್ನು ಮೇಲ್ದರ್ಜೆಗೇರಿಸಲಾಗಿತ್ತು. 2015-16ರ ಅವಧಿಯಲ್ಲಿ 1,253 ಕ್ರಾಸಿಂಗ್‌ಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ತಿಳಿಸಿದ್ದಾರೆ.