ಅಮೆರಿಕದಲ್ಲಿರುವ ಭಾರತೀಯ ಮೂಲದ ಸಿಇಒ ಒಬ್ಬರ ವಿರುದ್ಧ ಜನಾಂಗೀಯ ನಿಂದನೆ ಮಾಡಲಾಗಿದೆ. ಅಧ್ಯಕ್ಷ ದೊನಾಲ್ಡ್ ಟ್ರಂಪ್’ರ ಆರ್ಥಿಕ ಅಜೆಂಡಾವನ್ನು ಸಮರ್ಥಿಸುವುದಿಲ್ಲ ಬಂರ್ಥದ ಲೇಖನ ಬರೆದಿದ್ದುದಕ್ಕಾಗಿ ಜಿಎಂಎಂ ನಾನ್’ಸ್ಟಿಕ್ ಕೋಟಿಂಗ್ಸ್ ಸಿಇಒ ರವೀನ್ ಗಾಂಧಿ ಅವರನ್ನು ನಿಂದಿಸಲಾಗಿದೆ.
ನವದೆಹಲಿ: ಅಮೆರಿಕದಲ್ಲಿರುವ ಭಾರತೀಯ ಮೂಲದ ಸಿಇಒ ಒಬ್ಬರ ವಿರುದ್ಧ ಜನಾಂಗೀಯ ನಿಂದನೆ ಮಾಡಲಾಗಿದೆ. ಅಧ್ಯಕ್ಷ ದೊನಾಲ್ಡ್ ಟ್ರಂಪ್’ರ ಆರ್ಥಿಕ ಅಜೆಂಡಾವನ್ನು ಸಮರ್ಥಿಸುವುದಿಲ್ಲ ಬಂರ್ಥದ ಲೇಖನ ಬರೆದಿದ್ದುದಕ್ಕಾಗಿ ಜಿಎಂಎಂ ನಾನ್’ಸ್ಟಿಕ್ ಕೋಟಿಂಗ್ಸ್ ಸಿಇಒ ರವೀನ್ ಗಾಂಧಿ ಅವರನ್ನು ನಿಂದಿಸಲಾಗಿದೆ.
‘ಹಂದಿ, ನೀನು ಭಾರತಕ್ಕೆ ಹಿಂತಿರುಗು’ ಎಂದು ಟ್ರಂಪ್ ಬೆಂಬಲಿಗಳೆನ್ನಲಾದ ಮಹಿಳೆಯೊಬ್ಬಳು ನಿಂದಿಸಿದ್ದಾಳೆ.
ಅಮೆರಿಕಾದ ಚಾರ್ಲೊಟ್ಟೆಸ್ ವಿಲ್ಲೆಯಲ್ಲಿ ಬಿಳಿಯರ ಶ್ರೇಷ್ಠತಾವಾದಿಗಳು, ವಿರೋಧಿ ಹೋರಾಟಗಾರರೊಂದಿಗೆ ನಡೆಸಿದ ಘರ್ಷಣೆಯ ಬಳಿಕ ಗಾಂಧಿ, ಟ್ರಂಪ್’ರ ಆರ್ಥಿಕ ಅಜೆಂಡಾ ಟೀಕಿಸಿ ಲೇಖನ ಬರೆದಿದ್ದರು.
ಆ ನಂತರ –ಮೇಲ್, ಟ್ವೀಟರ್ ಮತ್ತು ವಾಯ್ಸ್ ಮೇಲ್ ಮಾಡಿ ಹಲವು ಮಂದಿ ಗಾಂಧಿಗೆ ನಿಂದಿಸಿದ್ದಾರೆ.
ಮಹಿಳೆಯೊಬ್ಬಳು ನಿಂದಿಸುವ ವಾಯ್ಸ್ ಮೇಲನ್ನು ಗಾಂಧಿ ಯೂಟ್ಯೂಬ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
