ವಾಷಿಂಗ್ಟನ್‌[ಆ.28]: ಡೊನಾಲ್ಡ್‌ ಟ್ರಂಪ್‌ರ ಕುಟುಂಬದೊಂದಿಗೆ ಹೋಟೆಲ್‌ ಉದ್ಯಮದಲ್ಲಿ ಪಾಲುದಾರನಾಗಿದ್ದ, ಭಾರತೀಯ ಮೂಲದ ದಿನೇಶ್‌ ಚಾವ್ಲಾ ಎಂಬಾತನನ್ನು ಅಮೆರಿಕದಲ್ಲಿ ಕಳ್ಳತನ ಆರೋಪದ ಮೇಲೆ ಬಂಧಿಸಲಾಗಿದೆ.

ಚಾವ್ಲಾ ಕಳೆದ ವಾರ ಮೆಂಫೀಸ್‌ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಸೂಟ್‌ಕೇಸ್‌ ಕದ್ದು ಕಾರಿನಲ್ಲಿ ಸಾಗಿಸಿದ್ದರು. ಪೊಲೀಸ್‌ ತನಿಖೆ ವೇಳೆ ಕಾರಿನಲ್ಲಿ ಕದ್ದ ಸೂಟ್‌ಕೇಸ್‌ ಪತ್ತೆಯಾಗಿತ್ತು. ಚಾವ್ಲಾ ಕದ್ದ ಸೂಟ್‌ಕೇಸ್‌ನಲ್ಲಿ 2.86 ಲಕ್ಷ ಮೌಲ್ಯದ ವಸ್ತುಗಳು ಇದ್ದವು. ವಿಚಾರಣೆ ವೇಳೆ, ಹಲವು ದಿನಗಳಿಂದ ಖುಷಿಗಾಗಿ ಸೂಟ್‌ಕೇಸ್‌ ಕದಿಯುತ್ತಿದ್ದೆ ಎಂದು ವಿಚಾರಣೆ ವೇಳೆ ಚಾವ್ಲಾ ಬಾಯಿ ಬಿಟ್ಟಿದ್ದಾನೆ.

ಬಂಧಿತ ದಿನೇಶ್‌ ಚಾವ್ಲಾ ಈ ಹಿಂದೆ ಡೊನಾಲ್ಡ್‌ ಟ್ರಂಪ್‌ ಸಹೋದರರಾದ ಜೆಆರ್‌ ಟ್ರಂಪ್‌ ಮತ್ತು ಎರಿಕ್‌ ಟ್ರಂಪ್‌ ಜತೆ ಸೇರಿ ಹೋಟೆಲ್‌ ಉದ್ಯಮ ನಡೆಸುತ್ತಿದ್ದರು.