ಐರ್ಲೆಂಡ್‌ ದೇಶದ ನೂತನ ಪ್ರಧಾನಿಯಾಗಿ ಹಾಲಿ ಸಚಿವ, ಭಾರತೀಯ ಮೂಲದ ಲಿಯೋ ವರ್ದಾಕರ್‌ (38) ಅವರನ್ನು ಆಯ್ಕೆ ಮಾಡಲಾಗಿದೆ. ಜೂನ್‌ 13ರಂದು ಸಂಸತ್‌ ಸಭೆ ಸೇರಲಿದ್ದು, ಅಲ್ಲಿ ಅಧಿಕೃತವಾಗಿ ಘೋಷಣೆ ಆಗಲಿದೆ. 

ಡಬ್ಲಿನ್‌(ಜೂ.03): ಐರ್ಲೆಂಡ್‌ ದೇಶದ ನೂತನ ಪ್ರಧಾನಿಯಾಗಿ ಹಾಲಿ ಸಚಿವ, ಭಾರತೀಯ ಮೂಲದ ಲಿಯೋ ವರ್ದಾಕರ್‌ (38) ಅವರನ್ನು ಆಯ್ಕೆ ಮಾಡಲಾಗಿದೆ. ಜೂನ್‌ 13ರಂದು ಸಂಸತ್‌ ಸಭೆ ಸೇರಲಿದ್ದು, ಅಲ್ಲಿ ಅಧಿಕೃತವಾಗಿ ಘೋಷಣೆ ಆಗಲಿದೆ. 

ಲಿಯೋ, ಪ್ರಧಾನಿ ಹುದ್ದೆಗೆ ಏರಿದ ಅತ್ಯಂತ ಕಿರಿಯ ಎಂಬ ಹಿರಿಮೆ ಹೊಂದಿದ್ದಾರೆ. ಜೊತೆಗೆ ದೇಶದ ಮೊದಲ ಸಲಿಂಗಿ ಪ್ರಧಾನಿ ಕೂಡಾ ಹೌದು. ಶುಕ್ರವಾರ ನಡೆದ ಆಡಳಿತಾರೂಢ ಫೈನ್‌ ಗೇಲ್‌ ಪಕ್ಷದ ಸಭೆಯಲ್ಲಿ ಲಿಯೋ ಅವರನ್ನು ನೂತನ ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಯಿತು. ಇವರು ಹಾಲಿ ಪ್ರಧಾನಿ ಎಂಡಾ ಕೆನ್ನೆ ಸ್ಥಾನವನ್ನು ತುಂಬಲಿದ್ದಾರೆ.

ವರ್ದಾಕರ್‌ ಅವರ ತಂದೆ ಅಶೋಕ್‌ ಮುಂಬೈ ಮೂಲದವರು. ಅಶೋಕ್‌ ಇಂಗ್ಲೆಂಡ್‌'ನಲ್ಲಿ ನರ್ಸ್‌ ಆಗಿದ್ದ ಐರ್ಲೆಂಡ್‌ ಮೂಲದ ಮಿರಿಯಂ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಕುಟುಂಬ ಐರ್ಲೆಂಡ್‌ಗೆ ತೆರಳಿತ್ತು. ಲಿಯೋ ಅಲ್ಲಿಯೇ ಹುಟ್ಟಿದ್ದರು.