Published : May 21 2017, 07:31 PM IST| Updated : Apr 11 2018, 12:39 PM IST
Share this Article
FB
TW
Linkdin
Whatsapp
Aalaap Narasipura
ಮೃತನ ಹೆಸರು ಆಲಾಪ್‌ ನರಸೀಪುರ. ಇಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಯಾ ಗಿದ್ದ ಆಲಾಪ್‌ ಅವರು ಕಾರ್ನೆಲ್‌ ಕಾಲೇಜಿನಲ್ಲಿ ಓದುತ್ತಿದ್ದರು. ಕಳೆದ ಬುಧವಾರದಿಂದ ಅವರು ನಾಪತ್ತೆಯಾಗಿದ್ದರು.
ನ್ಯೂಯಾರ್ಕ್(ಮೇ.21): 3 ದಿನದಿಂದ ನಾಪತ್ತೆಯಾಗಿದ್ದ ಬೆಂಗ ಳೂರು ಮೂಲದ 20 ವರ್ಷದ ಯುವಕನೊಬ್ಬ ಶವವಾಗಿ ಪತ್ತೆಯಾದ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆ ದಿದೆ. ಘಟನೆಯು ಇಲ್ಲಿನ ಭಾರತೀಯ ಸಮು ದಾಯವನ್ನು ಆಘಾತದ ಮಡುವಿಗೆ ತಳ್ಳಿದೆ. ಮೃತನ ಹೆಸರು ಆಲಾಪ್ ನರಸೀಪುರ. ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾ ಗಿದ್ದ ಆಲಾಪ್ ಅವರು ಕಾರ್ನೆಲ್ ಕಾಲೇಜಿನಲ್ಲಿ ಓದುತ್ತಿದ್ದರು. ಕಳೆದ ಬುಧವಾರದಿಂದ ಅವರು ನಾಪತ್ತೆಯಾಗಿದ್ದರು. ಕಾರ್ನೆಲ್ ಯುನಿವರ್ಸಿಟಿ ಪೊಲೀಸರು ಆಲಾಪ್ ಅವರಿಗಾಗಿ ಶೋಧ ನಡೆಸಿದ್ದರು. ಆದರೆ ಶುಕ್ರವಾರ ಅವರ ಶವ ಇಥಾಕಾ ಜಲಪಾತದ ಸನಿಹದ ಫಾಲ್ ಕ್ರೀಕ್ ಎಂಬಲ್ಲಿ ಪತ್ತೆಯಾಗಿದೆ. ಪೊಲೀಸರು ಈ ಶವವನ್ನು ಆಲಾಪ್ ನರಸೀಪುರ ಅವರದ್ದೇ ಎಂದು ಖಚಿತಪಡಿಸಿದ್ದಾರೆ. ಈವರೆಗೆ ಸಾವಿನ ಬಗ್ಗೆ ಯಾವುದೇ ಅನುಮಾನಗಳು ವ್ಯಕ್ತವಾಗಿಲ್ಲ. ಆದರೆ ತನಿಖೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಮೇ 17ರ ಮುಂಜಾನೆ ಆಲಾಪ್ ಕೊನೆಯ ಬಾರಿ ಕಾರ್ನೆಲ್ ಕ್ಯಾಂಪಸ್ನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ನಾಪತ್ತೆಯಾಗಿದ್ದರು. ಆಲಾಪ್ ಹುಡುಕಿಕೊಡುವಂತೆ ಅವರ ಪೋಷಕರಾದ ಬೆಂಗಳೂರು ಮೂಲದ ಜಯದತ್ತ ನರಸೀಪುರ ಫೇಸ್ಬುಕ್ ಮೂಲಕ ಮನವಿ ಮಾಡಿಕೊಂಡಿದ್ದರು. ಆಲಾಪ್ ಸಾವಿಗೆ ಅವರ ಸಹಪಾಠಿಗಳು ಮತ್ತು ಕಾಲೇಜಿನ ಆಡಳಿತ ಮಂಡಳಿಯವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ‘ಡಿಸೆಂಬರ್ನಲ್ಲಿ ಅವರ ಕೋರ್ಸ್ ಮುಗಿಯಬೇಕಿತ್ತು. ಆಲಾಪ್ ಧ್ಯೇಯ ಉಳ್ಳ ವಿದ್ಯಾರ್ಥಿಯಾಗಿ ದ್ದರು' ಎಂದು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೈಫ್ ರಾರಯನ್ ಲೊಂಬಾರ್ಡಿ ಸ್ಮರಿಸಿದ್ದಾರೆ. ಆಲಾಪ್ ತಂದೆ ಜಯದತ್ತ ನರಸೀಪುರ ಅವರು ಬೆಂಗಳೂರಿನ ವಿಜಯಾ ಹೈಸ್ಕೂಲ್ ಹಾಗೂ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದು ಬಳಿಕ ಕೆಲಸದ ನಿಮಿತ್ತ ಅಮೆರಿಕಕ್ಕೆ ತೆರಳಿದ್ದರು ಎಂದು ಅವರ ಫೇಸ್ಬುಕ್ ಪುಟ ಹೇಳುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.