ಜಗ್ಗೇಶ್ ಅವರು ಊಟ ಮಾಡಲೆಂದು  ಅಮೆರಿಕದ ಹೋಟೆಲ್'ಗೆ ತೆರಳಿದ್ದಾರೆ. ಈ ವೇಳೆ ಅಲ್ಲಿ ಭಾರತೀಯ ಚಿತ್ರರಂಗದ  ಎಲ್ಲಾ ಮೇರು ನಟರ ಭಾವಚಿತ್ರಗಳನ್ನೂ ಕೂಡ ಹಾಕಿದ್ದರೆಂದು ಹೇಳಿಕೊಂಡು ಅಭಿಮಾನ ಪಟ್ಟಿದ್ದಾರೆ.

ನ್ಯೂಯಾರ್ಕ್(ನ.28): ಹೊಟ್ಟೆಯ ಜತೆಗೆ ಮನವೂ ತುಂಬಿ ಬಂತು. ಕಲಾವಿದನಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಎನ್ನಿಸುತ್ತಿದೆ ಎಂದು ನಟ ಜಗ್ಗೇಶ್ ಅವರು ಟ್ವಿಟರ್'ನಲ್ಲಿ ಹೇಳಿಕೊಂಡಿದ್ದಾರೆ. ಅದಕ್ಕೆ ಕಾರಣ ಏನೆಂದರೆ ಅವರು ಅಮೆರಿಕದ ಹೋಟೆಲ್ ಒಂದಕ್ಕೆ ಭೇಟಿ ಕೊಟ್ಟಿದ್ದ ವೇಳೆ ನಡೆದ ಘಟನೆಯಾಗಿದೆ.

ಏನೆಂದರೆ ಜಗ್ಗೇಶ್ ಅವರು ಊಟ ಮಾಡಲೆಂದು ಹೋಟೆಲ್'ಗೆ ತೆರಳಿದ್ದಾರೆ. ಈ ವೇಳೆ ಅಲ್ಲಿ ಭಾರತೀಯ ಚಿತ್ರರಂಗದ ಎಲ್ಲಾ ಮೇರು ನಟರ ಭಾವಚಿತ್ರಗಳನ್ನೂ ಕೂಡ ಹಾಕಿದ್ದರೆನ್ನುವುದೇ ಆಗಿದೆ. ಅದರಲ್ಲಿ ಕನ್ನಡದ ವರನಟರಾದ ಡಾ. ರಾಜ್'ಕುಮಾರ್ ಅವರ ಫೋಟೊ , ತೆಲುಗಿನ ಎಸ್.ವಿ. ರಂಗರಾವ್, ಎನ್'ಟಿಆರ್, ಮಲಯಾಳಂನ ಪ್ರೇಮ್ ನಜೀರ್, ತಮಿಳೀನ ಶಿವಾಜಿ ಗಣೇಶನ್ ಫೋಟೊಗಳಿತ್ತು ಎಂದು ಹೇಳಿದ್ದಾರೆ.

ಅಲ್ಲದೇ ಈ ರೆಸ್ಟೋರೆಂಟ್'ಗೆ ಭೇಟಿ ಕೊಟ್ಟ ಪ್ರತೀ ಭಾರತೀಯನಿಗೂ ಕೂಡ ಹೆಮ್ಮೆ ಎನಿಸುವುದಂತೂ ನಿಜ ಎಂದು ಅವರು ತಮ್ಮ ಟ್ವೀಟ್'ನಲ್ಲಿ ತಿಳಿಸಿದ್ದಾರೆ.