Asianet Suvarna News Asianet Suvarna News

ಇಂಡೋನೇಷ್ಯಾ ವಿಮಾನ ದುರಂತ, ಊರಿಗೆ ಬರಬೇಕಿದ್ದ ದೆಹಲಿ ಫೈಲಟ್ ಸಾವು

ಇಂಡೋನೇಷ್ಯಾದಲ್ಲಿ ಪತನಗೊಂಡ ಲಯನ್ ಏರ್ ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಪೈಲಟ್  ದೆಹಲಿ ಮೂಲದವರಾಗಿದ್ದು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.  189 ಮಂದಿ ಪ್ರಯಾಣಿಕರೊಂದಿಗೆ ಹೊರಟಿದ್ದ ಲಯನ್ ಏರ್ ವಿಮಾನ ಸಮುದ್ರದಲ್ಲಿ ಪತನಗೊಂಡಿದೆ.

Indian embassy confirms death of Indian pilot Bhavye Suneja in Lion Air plane crash in indonesia
Author
Bengaluru, First Published Oct 29, 2018, 6:13 PM IST

ನವದೆಹಲಿ[ಅ.29]  ಇಂಡೋನೇಷ್ಯಾದಲ್ಲಿ ಪತನಗೊಂಡ ವಿಮಾನದ ಫೈಲೆಟ್ ಆಗಿದ್ದ ದೆಹಲಿ ಮೂಲದ ಭವ್ಯೆ ಸುನೇಜಾ ಎಂಬ 31 ವರ್ಷದ ಯುವಕ ಪ್ರಾಣ ಕಳೆದುಕೊಂಡಿದ್ದಾರೆ.ಈ ವಿಚಾರವನ್ನು ಭಾರತೀಯ ರಾಯಭಾರ ಕಚೇರಿಯೂ ದೃಢಪಡಿಸಿದೆ.

ನವದೆಹಲಿಯ ಮಯೂರ್ ವಿಹಾರ್ ಪ್ರದೇಶದ ಸುಜೇಜಾ 2011ರಲ್ಲಿ ಲಯನ್ ಏರ್ ಕಂಪೆನಿಗೆ ಪೈಲಟ್ ಆಗಿ ಸೇರ್ಪಡೆಯಾಗಿದ್ದರು. ಅವರು ಹೆಚ್ಚಾಗಿ ಬೋಯಿಂಗ್ 737 ವಿಮಾನ ಚಾಲನೆ ಮಾಡುತ್ತಿದ್ದರು. ಉತ್ತಮ ಕೌಶಲ್ಯ ಹೊಂದಿದ ವ್ಯಕ್ತಿ ಇಂದು ಮರೆಯಾಗಿದ್ದಾರೆ ಎಂದು ಅಧಿಕಾರಿಗಳು  ವಿಷಾದ ವ್ಯಕ್ತಪಡಿಸಿದ್ದಾರೆ.

ಸುನೇಜಾ ದೆಹಲಿಗೆ ಯಾವುದಾದರೂ ಒಂದು ರೀತಿಯಲ್ಲಿ ವರ್ಗಾವಣೆ ಸಿಗುತ್ತದೆಯೋ ಎಂದು ಕೆಲ ತಿಂಗಳಿನಿಂದ ಪ್ರಯತ್ನ ಮಾಡುತ್ತಿದ್ದರು. ಆದರೆ ಈಗವರೇ ಈ ಲೋಕದಿಂದಲೆ ಮರೆಯಾಗಿದ್ದಾರೆ.

Follow Us:
Download App:
  • android
  • ios