ನವದೆಹಲಿ(ಸೆ.05): ಪದೇ ಪದೇ ಅಣ್ವಸ್ತ್ರ ದಾಳಿಯ ಕುರಿತು ಮಾತನಾಡುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಖಡಕ್ ಎಚ್ಚರಿಕೆ ನೀಡಿದೆ. 

ಅಣ್ವಸ್ತ್ರ ಯುದ್ಧದ ಕನವರಿಕೆಯಲ್ಲಿರುವ ಪಾಕಿಸ್ತಾನಕ್ಕೆ, 1971ರ ಬಾಂಗ್ಲಾ ಯುದ್ಧ ಸೋಲನ್ನೂ ಮರೆಯುವಂತ  ದೊಡ್ಡ ಏಟು ನೀಡುವುದಾಗಿ ಚಿನಾರ್ ಕಾರ್ಪ್ಸ್ ಕಮಾಂಡರ್ ಲೆ.ಜ. ಕೆಜೆಎಸ್ ಧಿಲ್ಲೋನ್ ಎಚ್ಚರಿಕೆ ನೀಡಿದ್ದಾರೆ.

ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುವುದಷ್ಟೇ ಅಲ್ಲದೇ ಅಣ್ವಸ್ತ್ರ ಪ್ರಯೋಗದ ಕುರಿತು ಪ್ರಸ್ತಾಪಿಸುವ ಮೂಲಕ ಪಾಕಿಸ್ತಾನ ಭಾರತವನ್ನು ಕೆಣಕುತ್ತಿದೆ ಎಂದು ಧಿಲ್ಲೋನ್  ಕಿಡಿಕಾರಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಕೃತ್ಯಗಳನ್ನು ನಿಲ್ಲಿಸದೇ ಹೋದಲ್ಲಿ ಆ ದೇಶವನ್ನೇ ಬಲಿ ಪಡೆಯುವ ಕೆಲಸ ಮಾಡಬೇಕಾಗುತ್ತದೆ ಎಂದು ಧಿಲ್ಲೋನ್ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನ 1971ರ ಯುದ್ಧದ ಸೋಲನ್ನು ಮರೆತಿರುವಂತಿದೆ. ಭಾರತದ ವಿರುದ್ಧದ ತನ್ನ ದುಷ್ಕೃತ್ಯಗಳನ್ನು ನಿಲ್ಲಿಸದೇ ಹೋದಲ್ಲಿ 1971ರ ಯುದ್ಧದ ಸೋಲನ್ನು ಶಾಶ್ವತವಾಗಿ ಮರೆಯುವಂತ ಹೊಡೆತ ನೀಡುವುದಾಗಿ ಲೆ.ಜ. ಧಿಲ್ಲೋನ್ ಹೇಳಿದ್ದಾರೆ.