ಭಾರತವು ಯುದ್ಧ ಮಾಡುವುದಕ್ಕೆ ಸಿದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವನತ್ ಇತ್ತೀಚಿಗೆ ನೀಡಿರುವ ಹೇಳಿಕೆಗೆ, ಚೀನಾ 1962 ರಲ್ಲಿ ನಡೆದ ಯುದ್ಧವನ್ನು ಉಲ್ಲೇಖಿಸುತ್ತಾ, ಭಾರತೀಯ ಸೇನೆ ಇತಿಹಾಸದಿಂದ ಪಾಠ ಕಲಿತುಕೊಳ್ಳಬೇಕು ಎಂದು ಹೇಳಿದೆ. ಸಿಕ್ಕಿಂನ ಡಾಂಗ್ಲಾಂಗ್ ಪ್ರದೇಶದಲ್ಲಿ ನಿಯೋಜಿಸಿರುವ ಸೇನಾ ತುಕಡಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಚೀನಾ ಭಾರತಕ್ಕೆ ಹೇಳಿದೆ.

ನವದೆಹಲಿ (ಜೂ.29): ಭಾರತವು ಯುದ್ಧ ಮಾಡುವುದಕ್ಕೆ ಸಿದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವನತ್ ಇತ್ತೀಚಿಗೆ ನೀಡಿರುವ ಹೇಳಿಕೆಗೆ, ಚೀನಾ 1962 ರಲ್ಲಿ ನಡೆದ ಯುದ್ಧವನ್ನು ಉಲ್ಲೇಖಿಸುತ್ತಾ, ಭಾರತೀಯ ಸೇನೆ ಇತಿಹಾಸದಿಂದ ಪಾಠ ಕಲಿತುಕೊಳ್ಳಬೇಕು ಎಂದು ಹೇಳಿದೆ. ಸಿಕ್ಕಿಂನ ಡಾಂಗ್ಲಾಂಗ್ ಪ್ರದೇಶದಲ್ಲಿ ನಿಯೋಜಿಸಿರುವ ಸೇನಾ ತುಕಡಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಚೀನಾ ಭಾರತಕ್ಕೆ ಹೇಳಿದೆ.

ಚೀನಾ ವಿದೇಶಾಂಗ ಸಚಿವಾಲಯವು, ಫೋಟೋಗ್ರಾಫ್ ಒಂದನ್ನು ತೋರಿಸಿ, ಭಾರತವು ಡಾಂಗ್ಲಾಂಗ್ ಪ್ರದೇಶದಲ್ಲಿ ಅತಿಕ್ರಮಣ ಮಾಡಿದೆ. ಅಲ್ಲಿ ನಿಯೋಜಿಸಿರುವ ಸೇನೆಯನ್ನು ವಾಪಸ್ ತೆಗೆದುಕೊಂಡರೆ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ. ಯುದ್ಧ ಯುದ್ಧ ಎಂದು ಕೂಗಾಡುವುದನ್ನು ನಿಲ್ಲಿಸಿ ಎಂದು ಚೀನಾ ಹೇಳಿದೆ.