ಕಲ್ಲು ತೂರಾಟಗಾರನೊಬ್ಬನನ್ನು ಮಾನವ ತಡೆಗೋಡೆಯಾಗಿ ಬಳಸಿಕೊಂಡು ಕಾಶ್ಮೀರದಲ್ಲಿ ಚುನಾವಣಾಧಿಕಾರಿಗಳು ಹಾಗೂ ಯೋಧರನ್ನು ರಕ್ಷಿಸಿದ ಮೇಜರ್‌ ಲೀತುಲ್‌ ಗೊಗೊಯ್‌ ಅವರಿಗೆ ಗೌರವ ಸಮರ್ಪಿಸಿದ್ದನ್ನು ಭೂಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ‘ಕೊಳಕು ಸಮರ'ವನ್ನು ಭಾರತೀಯ ಸೇನೆ ಎದುರಿಸುತ್ತಿದೆ. ಆ ಸಮರವನ್ನು ‘ನವೀನ ವಿಧಾನ'ಗಳ ಮೂಲಕವೇ ಎದುರಿಸಬೇಕು. ಹೀಗಾಗಿ ಗೊಗೊಯ್‌ ಅವರನ್ನು ಗೌರವಿಸಿದ್ದೇವೆ ಎಂದು ಹೇಳಿದ್ದಾರೆ.
ನವದೆಹಲಿ(ಮೇ.29): ಕಲ್ಲು ತೂರಾಟಗಾರನೊಬ್ಬನನ್ನು ಮಾನವ ತಡೆಗೋಡೆಯಾಗಿ ಬಳಸಿಕೊಂಡು ಕಾಶ್ಮೀರದಲ್ಲಿ ಚುನಾವಣಾಧಿಕಾರಿಗಳು ಹಾಗೂ ಯೋಧರನ್ನು ರಕ್ಷಿಸಿದ ಮೇಜರ್ ಲೀತುಲ್ ಗೊಗೊಯ್ ಅವರಿಗೆ ಗೌರವ ಸಮರ್ಪಿಸಿದ್ದನ್ನು ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ‘ಕೊಳಕು ಸಮರ'ವನ್ನು ಭಾರತೀಯ ಸೇನೆ ಎದುರಿಸುತ್ತಿದೆ. ಆ ಸಮರವನ್ನು ‘ನವೀನ ವಿಧಾನ'ಗಳ ಮೂಲಕವೇ ಎದುರಿಸಬೇಕು. ಹೀಗಾಗಿ ಗೊಗೊಯ್ ಅವರನ್ನು ಗೌರವಿಸಿದ್ದೇವೆ ಎಂದು ಹೇಳಿದ್ದಾರೆ.
ಅಲ್ಲಿರುವ ಪರಿಸ್ಥಿತಿಯ ಮೇಲೆ ನಾನು ಪ್ರಭಾವ ಬೀರಲು ಆಗುವುದಿಲ್ಲ. ನಾನು ನಿಮ್ಮ ಜತೆ ಇದ್ದೇನೆ ಎಂದು ಯೋಧರಿಗೆ ಹೇಳಬಹುದಷ್ಟೇ. ಪರಿಸ್ಥಿತಿ ಕಠಿಣವಾಗ ಬಹುದು ಎಂದು ನಮ್ಮವರಿಗೆ ಹೇಳುತ್ತಲೇ ಇರುತ್ತೇನೆ. ಒಂದು ವೇಳೆ ಪರಿಸ್ಥಿತಿ ಬಿಗಡಾ ಯಿಸಿದರೆ, ಉದ್ದೇಶ ಕೆಟ್ಟದ್ದು ಅಲ್ಲದಿದ್ದರೆ ನಾನು ನಿಮ್ಮ ಜತೆ ಇರುತ್ತೇನೆ ಎಂದೂ ತಿಳಿಸಿರುತ್ತೇನೆ' ಎಂದು ವಿವರಿಸಿದ್ದಾರೆ.
‘ಕಾಶ್ಮೀರಿ ಜನ ಕಲ್ಲು ತೂರುವ ಬದಲು ಶಸ್ತ್ರಾಸ್ತ್ರ ಬಳಸಿ ದಾಳಿ ನಡೆಸಿದ್ದರೆ ನಮಗೆ ಸಂತೋಷವಾಗುತ್ತಿತ್ತು! ಆಗ ಏನು ಮಾಡಬೇಕಿತ್ತೋ ಅದನ್ನು ಮಾಡಬಹು ದಾಗಿತ್ತು' ಎಂದು ಹೇಳಿದ್ದಾರೆ. ದೇಶದ ಜನರು ಸೇನೆ ಮೇಲಿನ ಹೆದರಿಕೆಯನ್ನು ಕಳೆದುಕೊಂಡರೆ ದೇಶವೇ ಹಾಳಾಗುತ್ತದೆ.
ನಾವು ಸ್ನೇಹಪರ ಸೇನೆ. ಕಾನೂನು- ಸುವ್ಯವಸ್ಥೆ ಪುನಾಸ್ಥಾಪಿಸಲು ಬುಲಾವ್ ಬಂದರೆ, ನಮ್ಮ ಬಗ್ಗೆ ಜನರು ಹೆದರಲೇಬೇಕಾಗುತ್ತದೆ. ಆದಾಗ್ಯೂ ಗರಿಷ್ಠ ತಾಳ್ಮೆಯನ್ನು ಕಾಶ್ಮೀರದಲ್ಲಿ ವಹಿಸಲಾಗುತ್ತಿದೆ ಎಂದು ಕಾಶ್ಮೀರದಲ್ಲಿ ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ರಾವತ್ ತಿಳಿಸಿದ್ದಾರೆ.
4 ಜಿಲ್ಲೆಗಳಲ್ಲಿ ಮಾತ್ರ ಸಮಸ್ಯೆ:
‘ಕಾಶ್ಮೀರದಾದ್ಯಂತ ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದು ಹೇಳುವುದು ತಪ್ಪು. ದಕ್ಷಿಣ ಕಾಶ್ಮೀರದ ಕೇವಲ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಸಮಸ್ಯೆ ಇದೆ. ಈಗ ಗದ್ದಲ ಮಾಡುತ್ತಿರು ವವರು, ಯುವ ಸೇನಾಧಿಕಾರಿ ಲೆಫ್ಟಿನಂಟ್ ಉಮರ್ ಫಯಾಜ್ ಅವರು ರಜೆ ಮೇಲಿದ್ದಾಗ ಹತ್ಯೆಗೀಡಾಗಿದ್ದರ ಬಗ್ಗೆ ಏಕೆ ಏನೂ ಮಾತನಾಡುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ಜತೆ ಸೀಮಿತ ಯುದ್ಧದ ಸಂಭವವನ್ನು ತಾವು ನಿರೀಕ್ಷಿಸಿಲ್ಲ ಎಂದಿದ್ದಾರೆ.
